ಹಣ ನೀಡಿ ಪಕ್ಷದ ಟಿಕೆಟ್​ ಪಡೆಯಿರಿ: ಉತ್ತರ ಪ್ರದೇಶ ಕಾಂಗ್ರೆಸ್​ನಿಂದ ಹೊಸ ಆದೇಶ

ಹಣ ನೀಡಿ ಪಕ್ಷದ ಟಿಕೆಟ್​ ಪಡೆಯಿರಿ: ಉತ್ತರ ಪ್ರದೇಶ ಕಾಂಗ್ರೆಸ್​ನಿಂದ ಹೊಸ ಆದೇಶ

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮೊಟ್ಟಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಹಣ ಸಂಗ್ರಹಿಸುವ ಹೊಸ ಮಾರ್ಗವನ್ನು ಕಂಡುಹಿಡಿದಿದೆ.

ಕೆಲವೇ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ, ಕಾಂಗ್ರೆಸ್​ ಕೂಡ ಚುನಾವಣೆಗೆ ಭರ್ಜರಿಯಾಗಿ ತಯಾರಿ ನಡೆಸುತ್ತಿದೆ. ಆದರೆ, ಪಕ್ಷದಲ್ಲಿ ಆರ್ಥಿಕ ಸಂಪನ್ಮೂಲದ ಕೊರತೆಯ ಕಾರಣ ಟಿಕೆಟ್ ಮೂಲಕ ಹಣ ಸಂಗ್ರಹಿಸಲು ಕಾಂಗ್ರೆಸ್​ ಪಕ್ಷ ಮುಂದಾಗಿದೆ. ಈ ಬಗ್ಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಯ್ ಕುಮಾರ್ ಲಲ್ಲು ಹೊಸ ಸುತ್ತೋಲೆ ಹೊರಡಿಸಿದ್ದಾರೆ.

ಯಾರು ವಿಧಾನಸಭೆಗೆ ಕಾಂಗ್ರೆಸ್ ಟಿಕೆಟ್ ಬಯಸುತ್ತಾರೋ ಅವರು ತಮ್ಮ ಅರ್ಜಿಯೊಂದಿಗೆ ಪಕ್ಷದ ನಿಧಿಗೆ 11 ಸಾವಿರ ರೂಪಾಯಿ ಜಮಾ ಮಾಡಬೇಕೆಂದು ಸುತ್ತೋಲೆಯನ್ನು ಹೊಡಿಸಿದ್ದಾರೆ. ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 25 ಕೊನೆಯ ದಿನಾಂಕವಾಗಿದೆ. ಸಂಗ್ರಹವಾದ ಹಣವನ್ನು ಪಕ್ಷದ ಹಿತಾಸಕ್ತಿ ಮತ್ತು ಚುನಾವಣಾ ನಿರ್ವಹಣೆಗೆ ಬಳಸಲಾಗುವುದು ಎಂದು ಜಯ್ ಕುಮಾರ್ ಲಲ್ಲು ಹೇಳಿದ್ದಾರೆ.

ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ, ಜಿಲ್ಲಾ ಮತ್ತು ನಗರ ಮಟ್ಟದ ಕಾಂಗ್ರೆಸ್​ ಸಮಿತಿಗೆ ಸಲ್ಲಿಸಬೇಕು. ಡಿಸೆಂಬರ್ 25, 2021ರೊಳಗೆ ಅಭ್ಯರ್ಥಿಗಳು ಆರ್‌ಟಿಜಿಎಸ್, ಡಿಮ್ಯಾಂಡ್ ಡ್ರಾಫ್ಟ್ ಅಥವಾ ಪೇ ಆರ್ಡರ್ ಮೂಲಕ ಮೊತ್ತವನ್ನು ಜಮಾ ಮಾಡುವ ಮೂಲಕ ರಶೀದಿಯನ್ನು ಪಡೆಯಬೇಕೆಂದು ಸೂಚಿಸಿದ್ದಾರೆ.

ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಸಮಿತಿಗಳಿಗೆ ಕಳುಹಿಸಿರುವ ಅರ್ಜಿದಾರರ ಸಂಪೂರ್ಣ ಡೇಟಾವನ್ನು ಪರಿಶೀಲಿಸುತ್ತದೆ. ನಂತರ ಅಭ್ಯರ್ಥಿಗಳು ಕಾಂಗ್ರೆಸ್​ನಲ್ಲಿ ಹೇಗೆ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್​ ಪಕ್ಷಕ್ಕೆ ಅವರು ನೀಡಿದ ಕೊಡುಗೆ ಏನು ಎಂಬುವುದನ್ನು ಪರಿಶೀಲಿಸಲಾಗುತ್ತದೆ. ಪ್ರತಿ ವಿಧಾನಸಭೆಯಿಂದ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಲಾಗುತ್ತದೆ. ನಂತರ ಹೈಕಮಾಂಡ್​ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆಂದು ಜಯ್ ಕುಮಾರ್ ಲಲ್ಲು ಹೇಳಿದ್ದಾರೆ.

Related Stories

No stories found.
TV 5 Kannada
tv5kannada.com