ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮೀರತ್ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ಮಾಡಿದರು.
ವಿಶ್ವವಿದ್ಯಾನಿಲಯವನ್ನು ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಧಾನ ಪಟ್ಟಣದ ಸಾಲಾವಾ ಮತ್ತು ಕೈಲಿ ಗ್ರಾಮಗಳಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ.
ಪ್ರಧಾನಮಂತ್ರಿ ಅವರು ಕ್ರೀಡಾ ಸಂಸ್ಥೆಗೆ ಶಂಕುಸ್ಥಾಪನೆ ಮಾಡಿದ ನಂತರ ಜಿಮ್ಗೆ ಭೀತಿ ನೀಡಿದ್ದರು. ಈ ವೇಳೆ ‘ಫಿಟ್ ಇಂಡಿಯಾ’ ಸಂದೇಶವನ್ನು ವಿಸ್ತರಿಸುವ ಹಿನ್ನೆಲೆ ಜಿಮ್ ನಲ್ಲಿದ್ದ ಕೆಲವು ಸಾಧನಗಳನ್ನು ಬಳಸಿದರು.
ಪ್ರಧಾನಿ ಜಿಮ್ನಲ್ಲಿರುವ ವಿಡಿಯೋ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ನಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋ ಈಗಾಗಲೇ 900 ಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ ಮತ್ತು ಸಂಖ್ಯೆಗಳು ಇನ್ನೂ ಏರುತ್ತಿವೆ.