Thursday, January 20, 2022

ಇನ್ನುಮುಂದೆ ಬಿಎಸ್ಪಿ ಮುಖಂಡೆ ಮಾಯಾವತಿ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ವಂತೆ

Must read

ಉತ್ತರಪ್ರದೇಶದಲ್ಲಿ ಈಗ ಚುನಾವಣೆಯದ್ದೇ ಸದ್ದು. ಮತಗಳಿಕೆಗೆ ಸಾಕಷ್ಟು ಕಸರತ್ತು ನಡೆಯುತ್ತಿರುವ ಸಂಧರ್ಭದಲ್ಲಿ ಮತ್ತೊಂದು ಸುದ್ಧಿ ಹೊರ ಬಿದ್ದಿದೆ . ಬಿಎಸ್ಪಿ ಪಕ್ಷದ ಮುಖಂಡೆ ಮಾಯಾವತಿ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ವಂತೆ

ಪಕ್ಷ ಸಂಘಟನೆಗೆ ಮಾಯಾವತಿ ಸಾಕಷ್ಟು ಒತ್ತುಕೊಡುತ್ತಿದ್ದಾರೆ. ಗ್ರಾಮಗಳಿಗೆ ತೆರಳಿ ಪ್ರಚಾರ ಕಾರ್ಯವನ್ನೂ ಭರ್ಜರಿಯಾಗಿ ಮಾಡುತ್ತಿದ್ದಾರೆ. ಈತನ್ಮದ್ಯೆ ಬಿಎಸ್ಪಿಯ ಸತೀಶ್ ಚಂದ್ರ ಮಿಶ್ರಾ, ತಾನು ಮತ್ತು ಮಾಯಾವತಿ ಚುನಾವಣೆಯಲ್ಲಿ ಇನ್ನು ಮುಂದೆ ಸ್ಪರ್ದೆ ಮಾಡಲ್ಲ. ಎಂದು ಘೋಷಣೆ ಮಾಡಿದ್ದಾರೆ. ಈಗಾಗಲೆ ಸ್ಪರ್ಧಿಗಳ ಅಧಿಕೃತ ಪಟ್ಟಿಯನ್ನೂ ಕೂಡ ಬಿಡುಗಡೆ ಮಾಡಿದ್ದು ಅದರಲ್ಲಿ‌ಇಬ್ಬರ ಹೆಸರು ಕೂಡ ಇಲ್ಲ

ಇನ್ನು ಇದೇ ವೇಳೆ ಸತೀಶ್ ಚಂದ್ರ ಅಖಿಲೇಶ್ ಯಾದವ್ ಮೇಲೆ ಹರಿ ಹಾಯ್ದಿದ್ದಾರೆ .. ಅವರು ಹೇಳಿದಂತೆ 400 ಸೀಟುಗಳನ್ನ ಗಳಸೋದು ಕನಸಿನ ಮಾತು .. ಆ ಕನಸಿನಿಂದ ಮೊದಲು ಹೊರ ಬನ್ನಿ ಎಂದು ಟಾಂಗ್ ನೀಡಿದ್ದಾರೆ.ಇದೇ ವೇಳೆ ಉಳಿದ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಯಾವ ಕೆಲಸವನ್ನೂ ಮಾಡಿಲ್ಲ ಜನರು ಇವರಿಂದ ಬೇಸತ್ತಿದ್ದಾರೆ.ಅತಿ ಶೀಘ್ರದಲ್ಲಿ ಬಿಎಸ್ಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದಿದ್ದಾರೆ.

Latest article