ವ್ಯಕ್ತಿಯೊಬ್ಬರು ಸರ್ವೋಚ್ಛ ನ್ಯಾಯಾಲಯದ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಇದು ಎರಡನೇ ಬಾರಿ ನಡೆದಂತಹ ಘಟನೆಯಾಗಿದೆ.
50 ವರ್ಷದ ವ್ಯಕ್ತಿಯೊಬ್ಬ ಏಕಾಎಕಿ ನ್ಯಾಯಾಲಯದ ಮುಂದೆ ಬಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದ ಎನ್ನಲಾಗಿದೆ.
ಸದ್ಯ ಆ ವ್ಯಕ್ತಿ ಯಾರು..? ಯಾಕೆ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದರ ಬಗ್ಗೆ ಮಾಹಿತಿ ಇಲ್ಲ. ತಾನು ಬಡವ ತುಂಬಾ ನೊಂದಿದ್ದೀನಿ ಎಂದು ಪೊಲೀಸರಲ್ಲಿ ಹೇಳುತ್ತಿದ್ದ. ನಂತರ ಸ್ವಲ್ಪ ದೂರ ಸಾಗಿ ಏಕಾಏಕಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ರಸ್ತೆಯಲ್ಲಿ ಮಲಗಿಬಿಟ್ಟಿದ್ದ ಎನ್ನಲಾಗಿದೆ.
ತಕ್ಷಣ ಅಲ್ಲಿದ್ದ ಭದ್ರತಾ ಪಡೆ ಆತನ ಮೈಮೇಲೆ ಅಂಟಿಕೊಂಡ ಬೆಂಕಿಯನ್ನು ಆರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.