Tuesday, August 16, 2022

ಜನಸಂದಣಿ ಮಧ್ಯೆಯೇ ಮಹಿಳೆಯ ಕತ್ತು ಸೀಳಿ ಕೊಲೆ

Must read

ನವದೆಹಲಿ: ವ್ಯಕ್ತಿಯೋರ್ವ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ದೆಹಲಿಯ ದ್ವಾರಕ ಪ್ರದೇಶದಲ್ಲಿ ನಡೆದಿದೆ. ಈ ದೃಶ್ಯ ಹತ್ತಿರದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಭಾ ಸಾವನ್ನಪ್ಪಿದ ಮಹಿಳೆ. ಆರೋಪಿಯನ್ನು ದಿಲೀಪ್​ ಎಂದು ಗುರುತಿಸಲಾಗಿದೆ. ದಿಲೀಪ್ ವಿಭಾ ಅವರ ಅಂಗಡಿಯಲ್ಲಿ ಆಗಾಗ ಸಿಗರೇಟ್ ಮತ್ತು ದಿನಸಿ ವಸ್ತುಗಳನ್ನು ಖರೀದಿಸುತ್ತಿದ್ದ. ಆಕೆಗೆ ಕೊಡಬೇಕಾದ ಹಣ ಸ್ವಲ್ಪ ಬಾಕಿ ಇತ್ತು. ಭಾನುವಾರ ಅಂಗಡಿಯ ಬಳಿ ಆಗಮಿಸಿದ ದಿಲೀಪ್​, ಸಿಗರೇಟ್ ಕೇಳಿದ್ದಾನೆ. ಈ ವೇಳೆ ಹಳೆ ಬಾಕಿ ನೀಡುವಂತೆ ಕೇಳಿದಾಗ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳವಾಗಿದೆ. ಇದಾದ ಬಳಿಕ ಆರೋಪಿ ಸಿಟ್ಟಿಗೆದ್ದು ಮಹಿಳೆಯ ಕತ್ತು ಸೀಳಿದ್ದಾನೆ.

ಈ ವೇಳೆ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ವಿಭಾ ರಸ್ತೆ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Latest article