Tuesday, October 26, 2021

‘ಶಾರುಖ್ ಖಾನ್ ಬಿಜೆಪಿ ಸೇರಿದ್ರೆ ಡ್ರಗ್ಸ್ ಶುಗರ್​ ಪೌಡರ್ ಆಗುತ್ತೆ’

Must read

ನವದೆಹಲಿ: ಈಗ ಏನಾದರೂ ಶಾರುಖ್ ಖಾನ್ ಬಿಜೆಪಿಗೆ ಸೇರ್ಪಡೆಯಾದರೆ ಡ್ರಗ್ಸ್ ಎನ್ನುವುದು ಸಕ್ಕರೆಯ ಪುಡಿಯಾಗಿ ಬದಲಾಗಬಹುದು ಎಂದು ಮಹಾರಾಷ್ಟ್ರ ಸಚಿವ ಛಗನ್ ಭುಜ್‍ಬಲ್ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‍ನ ಮುಂದ್ರಾ ಬಂದರಿನಲ್ಲಿ ಭಾರೀ ಪ್ರಮಾಣದ ಮಾದಕದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಪದೇಪದೆ ಹೆರಾಯಿನ್‍ಗಳು ಸಿಕ್ಕಿವೆ. ಈ ಪ್ರಕರಣವನ್ನು ವ್ಯಾಪಕವಾಗಿ ತನಿಖೆ ನಡೆಸುವುದು ಬಿಟ್ಟು, ಎನ್‍ಸಿಬಿ ಶಾರುಖ್ ಖಾನ್ ಪುತ್ರನನ್ನು ಹಿಡಿದುಕೊಂಡಿದೆ. ಶಾರುಖ್ ಖಾನ್ ಬಿಜೆಪಿ ಸೇರ್ಪಡೆಯಾದರೆ ಡ್ರಗ್ಸ್‌ನ್ನು ಸಕ್ಕರೆ ಪೌಡರ್ ಎಂದು ನಿರೂಪಿಸಿ, ಆರ್ಯನ್ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದಾರೆ.

ಮುಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧಿಲಾಗಿದ್ದು, ಜಾಮೀನು ಕೂಡ ನೀಡದೆ ನಿರಂತರವಾಗಿ ವಿಚಾರಣೆ ನಡೆಸಲಾಗುತ್ತಿದೆ.

 

More articles

Latest article