Monday, January 30, 2023

ನಾಯಕಿ ಕೃತಿ ಸನೋನ್ ಪ್ರಭಾಸ್ ಮದ್ಯೆ ಲವ್?

Must read

ಸಧ್ಯ ಪ್ರಭಾಸ್ ಆದಿಪುರುಷ, ಸಲಾರ್, ಪ್ರಾಜೆಕ್ಟ್ ಕೆ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಆದಿಪುರುಷ್ ನಾಯಕಿ ಕೃತಿ ಸನೋನ್ ಪ್ರಭಾಸ್ ಅವರನ್ನು ಲವ್ ಮಾಡುತ್ತಿದ್ದಾರೆ ಎಂಬ ಮಾತು ಗಳು ಎಲ್ಲೆಡೆ ಕೇಳಿ ಬರುತ್ತಿದೆ. ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್. ಈ ಹಿಂದೆ ಪ್ರಭಾಸ್ ಮತ್ತು ಅನುಷ್ಕಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸದ್ಯ ಪ್ರಭಾಸ್ ಆದಿಪುರುಷ ನಾಯಕಿ ಕೃತಿ ಸನೋನ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬುದು ಲೇಟೆಸ್ಟ್ ಟಾಕ್ ಟಾಲಿವುಡ್‌ಗಿಂತ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬಾಲಿವುಡ್ ಹೀರೋ ವರುಣ್ ಧವನ್ ತಮ್ಮ ‘ವುಲ್ಫ್’ ಪ್ರಚಾರದಲ್ಲಿದ್ದಲ್ಲಿ ಕೃತಿ ಮನಸ್ಸಿನಲ್ಲಿ ಒಬ್ಬ ಹೀರೋ ಇದ್ದು ಈತ ಮುಂಬೈನಲ್ಲಿ ಇಲ್ಲ. ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್ ಮಾಡುತ್ತಿದ್ದಾನೆ ಎಂದು ಬಾಂಬ್ ಸಿಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಇತ್ತೀಚೆಗೆ ಕೃತಿ ಸನೋನ್ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ತನ್ನ ಪೋಸ್ಟ್‌ನಲ್ಲಿ ಅಂತಹದ್ದೇನೂ ಇಲ್ಲ, ಆಧಾರ ರಹಿತ ವದಂತಿಗಳನ್ನು ನಂಬಬೇಡಿ, ತನ್ನ ಮದುವೆ ನಿಶ್ಚಯವಾಗಿದೆ ಎಂಬ ಸುದ್ದಿ ಕೇವಲ ಸುಳ್ಳು ಸುದ್ದಿ ಅಂತ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ. ಸದ್ಯ ಕೃತಿ ಸನೋನ್ ಅವರು ತಮ್ಮ ಮದುವೆ ಸುದ್ದಿಯನ್ನು ಸುಳ್ಳು ಎಂದು ಹೇಳಿದ್ದು ಅಂತೂ ಈ ಒಂದು ವದಂತಿಗೆ ತೆರೆ ಬಿದ್ದ ಹಾಗಾಗಿದೆ.

Latest article