Thursday, May 19, 2022

ಮಹಿಳಾ ಕಾನ್ಸ್ಟೇಬಲ್ ಗೆ ಪುರುಷನಾಗಲು ಅನುಮತಿ ನೀಡಿದ್ದ ಕೋರ್ಟ್ 

Must read

ಭೋಪಾಲ್​​(ಮಧ್ಯಪ್ರದೇಶ): ಮಧ್ಯಪ್ರದೇಶ ಸರ್ಕಾರದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಮಹಿಳಾ ಕಾನ್​​ಸ್ಟೇಬಲ್​​ ಒಬ್ಬರು ಪುರುಷನಾಗಿ ಬದಲಾಗಲು ಅನುಮತಿ ನೀಡಲಾಗಿದೆ. ಅಲ್ಲಿನ ಗೃಹ ಇಲಾಖೆ ಇದಕ್ಕೆ ಅನುಮತಿ ನೀಡಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್​ ರಾಜೋರಾ ತಿಳಿಸಿದ್ದಾರೆ. ಮಧ್ಯಪ್ರದೇಶ ಸರ್ಕಾರದ ಗೃಹ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಪುರುಷನಾಗಿ ಬದಲಾಗಲು ಅನುಮತಿ ನೀಡಿರುವ ಮೊದಲ ಪ್ರಕರಣ ಇದಾಗಿದೆ ಎಂದು ತಿಳಿಸಿರುವ ಅವರು, ಡಿಸೆಂಬರ್​​ 1ರಂದು ಅನುಮತಿ ನೀಡಲಾಗಿದೆ ಎಂದಿದ್ದಾರೆ. ಲಿಂಗ ಬದಲಾವಣೆಗೆ ಸಂಬಂಧಿಸಿದಂತೆ 2019ರಲ್ಲಿ ಮಹಿಳಾ ಕಾನ್ಸ್​​ಟೇಬಲ್​​​ ​​​​ ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಪೊಲೀಸ್ ಇಲಾಖೆ ಈ ಅರ್ಜಿಯನ್ನ ರಾಜ್ಯ ಗೃಹ ಇಲಾಖೆಗೆ ರವಾನೆ ಮಾಡಿತ್ತು. ಅದರ ಪರಿಶೀಲನೆ ನಡೆಸಿರುವ ಕೇಂದ್ರ ಇದೀಗ ಅನುಮತಿ ನೀಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಮಹಿಳೆ ಚಿಕ್ಕವಳಾಗಿದ್ದಾಗಿನಿಂದಲೂ ಲಿಂಗ ಗುರುತಿಸುವಿಕೆ ಸಮಸ್ಯೆ ಎದುರಿಸುತ್ತಿದ್ದರಂತೆ. ಅದೇ ಕಾರಣಕ್ಕಾಗಿ ಲಿಂಗ ಬದಲಾವಣೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು ಎನ್ನಲಾಗಿದೆ.ಪರುಷನಾಗಿ ಬದಲಾದ ನಂತರ ಪುರುಷ ಕಾನ್ಸ್​ಟೇಬಲ್​​​​ಗಳಂತೆ ಕೆಲಸ ಮಾಡಬಹುದಾಗಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

Latest article