ವಿಮಾನ ಪ್ರಯಾಣಕ್ಕೆ ವಿಶೇಷಚೇತನ ಮಗು ಹಾಗು ಅವರ ಕುಟುಂಬವನ್ನ ತಡೆದ ಘಟನೆ ನಡೆದಿದೆ.
ಇತರ ಪ್ರಯಾಣಿಕರಿಗೆ ಅನಾನುಕೂಲವಾಗುತ್ತದೆಂದು ಏರ್ ಇಂಡಿಗೋ ಸಂಸ್ಥೆ ಪ್ರಯಾಣಕ್ಕೆ ಅನುಮತಿ ನೀಡಿರಲಿಲ್ಲ.
ಈ ಘಟನೆಯ ಬಗ್ಗೆ ವಿಶೇಷಚೇತನ ಮಗುವಿನ ಕುಟುಂಬಸ್ಥರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ವಿಮಾನಯಾನ ಸಚಿವರಿಗೆ ಟ್ಯಾಗ್ ಮಾಡಿ ತಮ್ಮ ನೋವು ತೋಡಿಕೊಂಡಿದ್ದಾರೆ. ಇದನ್ನ ಗಮನಿಸಿದ ವಿಮಾನಯಾನ ಸಚಿವ ಜ್ಯೋತಿರಾರಾಧ್ಯ ಸಿಂಧ್ಯ ಅವರು ಈ ರೀತಿ ಮನುಷ್ಯರ ಮೇಲೆ ದಬ್ಬಾಳಿಕೆ ಮಾಡಬಾರದು ಇದನ್ನ ಸಹಿಸೋದಕ್ಕೆ ಸಾಧ್ಯವಿಲ್ಲ.
ಏರ್ ಇಂಡಿಗೋ ಸಂಸ್ಥಯೇ ತನಿಖೆ ನಡೆಸಬೇಕೆಂದು ಸೂಚನೆ ನೀಡಿದರು. ಇದಕ್ಕೆ ಸಂಬಂಧಟ್ಟಂತೆ ಏರ್ ಇಂಡಿಗೋ ಸಿಬ್ಬಂಧಿಯೊಬ್ಬ ಉಳಿದ ಪ್ರಯಾಣಿಕರ ಹಿತದೃಷ್ಟಿಯಿಂದ ಪ್ರಯಾಣ ಮಾಡಲು ಬಿಡಲಿಲ್ಲ ಎಂದಿದ್ದಾರೆ. ಇನ್ನು ಈ ತಾರತಮ್ಯದ ಬಗ್ಗೆ ತನಿಖೆ ನಡೆಸಲು ನಿರ್ದೇಶಿಸಲಾಗಿದೆ.