ಗುಜರಾತ್: ಸೂರತ್ ನಗರದ ಸಚಿನ್ ಪ್ರದೇಶದಲ್ಲಿ ರಾಸಾಯನಿಕ ತುಂಬಿದ್ದ ಟ್ಯಾಂಕರ್ ಸೋರಿಕೆಯಾಗಿದ್ದು, ಗ್ಯಾಸ್ ಲಿಕೇಜ್ನಿಂದ ಉಸಿರುಗಟ್ಟಿ 6 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ, 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಅವರೆಲ್ಲರನ್ನೂ ಸೂರತ್ನ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಜಿಐಡಿಸಿಯ ರಾಜಕಮಲ್ ಚಿಕ್ಕಡಿ ಪ್ಲಾಟ್ ನಂ.362ರ ಹೊರಗೆ ನಿಂತಿದ್ದ ಕೆಮಿಕಲ್ ಟ್ಯಾಂಕರ್ನಿಂದ 8-10 ಮೀಟರ್ ದೂರದಲ್ಲಿ ಎಲ್ಲ ಕಾರ್ಮಿಕರು ಮಲಗಿದ್ದರು. ಏಕಾಏಕಿ ಟ್ಯಾಂಕರ್ನ ಡ್ರೈನೇಜ್ ಪೈಪ್ನಿಂದ ಗ್ಯಾಸ್ ಸೋರಿಕೆಯಾಗಿದೆ. ಇದರಿಂದಾಗಿ ಮಲಗಿದ್ದ ಕಾರ್ಮಿಕರು ಮತ್ತು ಮಿಲ್ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಅಸ್ವಸ್ಥಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದರು.
ಟ್ಯಾಂಕರ್ನ ಪೈಪ್ ಸೋರಿಕೆಯಾದ ತಕ್ಷಣ ಗ್ಯಾಸ್ನಿಂದಾಗಿ ಇಡೀ ಮಿಲ್ನಲ್ಲಿದ್ದ ಎಲ್ಲರನ್ನೂ ಉಸಿರುಗಟ್ಟಿಸಿದ್ದು, ಮಿಲ್ನ ಕಾರ್ಮಿಕರು ನೆಲಕ್ಕೆ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.