ಸ್ವಿಗ್ಗಿ ,ಜೊಮ್ಯಾಟೋ ಮೇಲೂ ಜಿಎಸ್​ಟಿ ಹೊರೆ..!

ಸ್ವಿಗ್ಗಿ ,ಜೊಮ್ಯಾಟೋ ಮೇಲೂ ಜಿಎಸ್​ಟಿ ಹೊರೆ..!

ಈಗಾಗಲೇ ಜನ ಸರ್ಕಾರದ ರಾಕ್ಷಸ ತೆರಿಗೆ ವ್ಯವಸ್ಥೆಯಿಂದ ಭ್ರಮನಿರಸನಕ್ಕೆ ಒಳಗಾಗಿದ್ದಾರೆ. ಕೂತರೂ ತೆರಿಗೆ, ನಿಂತರೂ ತೆರಿಗೆ, ಮಲಗಿದ್ರೂ ತೆರಿಗೆ ಎನ್ನೋ ರೀತಿಯಾಗಿದೆ ಸದ್ಯ ಜನಸಾಮಾನ್ಯರ ಸ್ಥಿತಿ. ಇದೀಗ ಆನ್​ಲೈನ್​ ಫುಡ್ ಡೆಲಿವರಿ ಆ್ಯಪ್​ಗಳಾದ ಜೊಮ್ಯಾಟೋ ಹಾಗೂ ಸ್ವಿಗ್ಗಿಯಂತಹ ಆಹಾರ ವಿತರಣೆ ಅಪ್ಲಿಕೇಶನ್​​ಗಳನ್ನೂ ಸರಕು ಹಾಗೂ ಸೇವಾ ತೆರಿಗೆ (GST) ಮಂಡಳಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಯೋಚಿಸಿದೆ.

ಇದರ ಪರಿಣಾಮವಾಗಿ ಇನ್ಮುಂದೆ ಡೆಲಿವರಿ ಅಪ್ಲಿಕೇಶನ್​ಗಳಲ್ಲಿ ಫುಡ್ ಆರ್ಡರ್ ಮಾಡಿದಾಗ ಜಿಎಸ್​ಟಿ ಬೀಳಲಿದೆ ಎನ್ನಲಾಗಿದೆ. ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಆಹಾರ ವಿತರಣಾ ಅಪ್ಲಿಕೇಶನ್​ಗಳನ್ನು ರೆಸ್ಟೋರೆಂಟ್ ಸೇವೆಗಳ ಅಡಿಯಲ್ಲೇ ತರಲು ಪ್ಲಾನ್ ಮಾಡಲಾಗಿದೆ. ಈ ಮೂಲಕ ಫುಡ್ ಡೆಲಿವರಿ ಸೇವೆಗಳ ಮೇಲೂ ತೆರಿಗೆ ವಿಧಿಸುವ ಸಾಧ್ಯತೆ ಇದೆ.

ಶುಕ್ರವಾರದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಈ ವಿಚಾರವನ್ನು ಚರ್ಚೆ ಮಾಡುವ ಸಾಧ್ಯತೆಯಿದೆ. ತೆರಿಗೆ ದರ ಬದಲಾವಣೆಗಳ ಕುರಿತು ಸಲಹೆ ನೀಡುವ ವಿವಿಧ ರಾಜ್ಯದ ಅಧಿಕಾರಿಗಳನ್ನು ಒಳಗೊಂಡ ಫಿಟ್ಮೆಂಟ್ ಸಮಿತಿಯು ರೆಸ್ಟೋರೆಂಟ್ ಸೇವೆಗಳನ್ನು ಜನತೆಗೆ ಸರಬರಾಜು ಮಾಡುವ ಇ ಕಾಮರ್ಸ್ ಆಪರೇಟರ್​ಗಳನ್ನೂ ರೆಸ್ಟೋರೆಂಟ್ ಸೇವೆಗಳ ವ್ಯಾಪ್ತಿಗೆ ತರುವಂತೆ ಸಲಹೆ ನೀಡಿದೆ. ಒಂದು ವೇಳೆ ಈ ಸಲಹೆಯು ಕಾರ್ಯರೂಪಕ್ಕೆ ಬಂದಲ್ಲಿ ಸ್ವಿಗ್ಗಿ, ಜೊಮ್ಯಾಟೋದಂತಹ ಅಪ್ಲಿಕೇಶನ್​ಗಳೂ ಸಹ ಜಿಎಸ್​​ಟಿ ಪಾವತಿಸಬೇಕಾಗುತ್ತದೆ. ಇದರ ಮೂಲಕ ಜನಸಾಮಾನ್ಯರ ಮೇಲೆ ಅಧಿಕ ಹೊರೆ ಬೀಳಲಿದೆ.

Related Stories

No stories found.
TV 5 Kannada
tv5kannada.com