Monday, November 29, 2021

ಭಾರತೀಯ ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ಬೆಲೆಯನ್ನು 400% ನಷ್ಟು ಕಡಿಮೆ ಮಾಡಿದ ಕೇಂದ್ರ ಸರ್ಕಾರ!

Must read

ನವದೆಹಲಿ: ಭಾರತೀಯ ರೈಲ್ವೆ ಈಗ ಪ್ಲಾಟ್ ಫಾರ್ಮ್ ಟಿಕೆಟ್​ಗಳ ಬೆಲೆಯನ್ನು ಕಡಿಮೆ ಮಾಡಿದೆ. ಸದ್ಯಕ್ಕೆ ಪ್ಲಾಟ್ ಫಾರ್ಮ್ ಟಿಕೆಟ್ ೫೦ ರೂ.ಗಳ ಬದಲು ೧೦ ರೂ.ಗೆ ಲಭ್ಯವಾಗಲಿವೆ ಮತ್ತು ಈ ಆದೇಶವು ನವೆಂಬರ್ ೨೫ ರಿಂದ ಜಾರಿಗೆ ಬರಲಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ಅನ್ನು ೫೦ ರೂ.ಗೆ ಹೆಚ್ಚಿಸಲಾಗಿತ್ತು. ಇದರಿಂದ ರೈಲ್ವೆ ಪ್ಲಾಟ್ಫಾರ್ಮ್ ನಲ್ಲಿ ಜನದಟ್ಟಣೆಯನ್ನು ತಪ್ಪಿಸಬಹುದು ಎಂದು ಸಮಜಾಯಿಶಿ ನೀಡಲಾಗಿತ್ತು. ಈಗ ಕೊರೊನಾ ಪರಿಸ್ಥಿತಿಯಲ್ಲಿ ಸುಧಾರಣೆಕಂಡುಬಂದಿದ್ದು, ರೈಲ್ವೆ ನಿಲ್ದಾಣಗಳಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಿದೆ.
ಕೇಂದ್ರ ರೈಲ್ವೆ ಹೊರಡಿಸಿದ ಆದೇಶದ ಪ್ರಕಾರ, ಪ್ಲಾಟ್ ಫಾರ್ಮ್ ಟಿಕೆಟ್ ಗಳ ಬೆಲೆಯನ್ನು ೫೦ ರಿಂದ ೧೦ ರೂ.ಗೆ ಇಳಿಸಲಾಗಿದೆ. ಆದೇಶದ ಪ್ರಕಾರ ಹೆಚ್ಚಿಸಲಾಗಿದ್ದ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ಗಳ ಬೆಲೆಯನ್ನು ೧೦ ರೂ.ಗೆ ಇಳಿಸಲಾಗಿದೆ. ಮತ್ತೊಂದೆಡೆ ದೆಹಲಿ-ಎನ್​ಸಿಆರ್​ನ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ಗಳ ಬೆಲೆಗಳನ್ನು ಸಹ ಕಡಿಮೆ ಮಾಡಲಾಗಿದೆ.
ಕೊರೊನಾ ಸಮಯದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿತ್ತು.
ಕೊರೊನಾ ಸೋಂಕಿನಿಂದಾಗಿ ರೈಲ್ವೆ ಹಲವಾರು ಬದಲಾವಣೆಗಳನ್ನು ಮಾಡಿತ್ತು. ಕೊರೊನಾ ಅವಧಿಯಲ್ಲಿ ಹೆಚ್ಚಿನ ರೈಲುಗಳ ಕಾರ್ಯಾಚರಣೆಯನ್ನು ಸಹ ದೀರ್ಘಕಾಲದವರೆಗೆ ನಿಲ್ಲಿಸಲಾಯಿತು. ಇದಲ್ಲದೆ ಎಲ್ಲಾ ರೈಲುಗಳನ್ನು ವಿಶೇಷ ವರ್ಗಕ್ಕೆ ಬದಲಾಯಿಸಲಾಯಿತು. ಇದೇ ವೇಳೆ ರೈಲುಗಳ ಟಿಕೆಟ್ ದರವನ್ನೂ ಹೆಚ್ಚಿಸಲಾಯಿತು. ಕೊರೊನಾ ಅವಧಿಯಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ಬೆಲೆಯನ್ನು ರೂ.50ಕ್ಕೆ ಹೆಚ್ಚಿಸಲಾಯಿತು.ಸದ್ಯ ಎಲ್ಲಾ ಸಾಮಾನ್ಯ ರೈಲುಗಳನ್ನು ವಿಶೇಷ ವರ್ಗದಿಂದ ಸಾಮಾನ್ಯ ಸ್ಥಿತಿಗೆ ಮರಳಿಸಲಾಗಿದೆ.

Latest article