Tuesday, August 16, 2022

ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆದ ಗೋ ಬ್ಯಾಕ್ ಮೋದಿ! ಕುಸಿಯುತ್ತಿದೆಯಾ ಮೋದಿ ಜನಪ್ರಿಯತೆ?

Must read

ಅಮೃತಸರ: ಪಂಜಾಬ್‌ನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಪರ ಪ್ರಚಾರ ಮಾಡಲು ಮತ್ತು ರಾಜ್ಯಕ್ಕೆ ಹಲವಾರು ಉಡುಗೊರೆಗಳನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ಫಿರೋಜ್‌ಪುರದಲ್ಲಿ ಚುನಾವಣಾ ರ‍್ಯಾಲಿನಡೆಸಿದ್ದು ಇವುಗಳಲ್ಲಿ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ, ಫಿರೋಜ್‌ಪುರದಲ್ಲಿ ಪಿಜಿಐ ಉಪಗ್ರಹ ಕೇಂದ್ರ ಮತ್ತು ಕಪುರ್ತಲಾ-ಹೊಶಿಯಾರ್‌ಪುರದಲ್ಲಿ ಎರಡು ಹೊಸ ವೈದ್ಯಕೀಯ ಕಾಲೇಜುಗಳ ಅಡಿಪಾಯ ಸೇರಿದಂತೆ ಹಲವಾರು ಯೋಜನೆಗಳಿವೆ.

ಆದರೆ, ರೈತ ಸಂಘಟನೆಗಳ ಪ್ರತಿಭಟನೆಯಿಂದಾಗಿ ರ‍್ಯಾಲಿಗೆ ಅಡ್ಡಿಯಾಗಿದ್ದು ಫಿರೋಜ್‌ಪುರದಲ್ಲೂ ಮಳೆ ಆರಂಭವಾಗಿದೆ.

ಪ್ರಧಾನಿ ಮೋದಿಯವರ ಭೇಟಿಗೂ ಮುನ್ನ, ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ಮಂಜಿಂದರ್ ಸಿರ್ಸಾ ಅವರು ಪಂಜಾಬ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ..

“ಪಂಜಾಬ್‌ನಲ್ಲಿ ಭ್ರಷ್ಟಾಚಾರ ಮುಕ್ತ ಪ್ರಗತಿಪರ ಸರ್ಕಾರವನ್ನು ರಚಿಸಲು ಸಮರ್ಥ ಮತ್ತು ಬದ್ಧವಾಗಿರುವ ಏಕೈಕ ಪಕ್ಷ ಬಿಜೆಪಿ.” ಎಂದು ಹೇಳಿದ್ದು ಮೋದಿ ಸಹ ಟ್ವೀಟ್ ಮಾಡಿ “ಇಂದು ಪಂಜಾಬ್‌ನ ನನ್ನ ಸಹೋದರಿಯರು ಮತ್ತು ಸಹೋದರರ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. 42,750 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಫಿರೋಜ್‌ಪುರದಲ್ಲಿ ನಡೆಯಲಿದ್ದು, ಜನರ ಜೀವನಮಟ್ಟ ಸುಧಾರಿಸಲಿದೆ.” ಎಂದಿದ್ದಾರೆ.

ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗಳು ಕೂಡ ಪ್ರಾರಂಭವಾಗಿವೆ. #GoBackModi Twitter ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ. ಟ್ರಾಕ್ಟರ್ ಟು ಟ್ವಿಟರ್ ಎಂಬ ಸಾಮಾಜಿಕ ಮಾಧ್ಯಮ ಪುಟದಲ್ಲೂ ಪ್ರಧಾನಿ ಮೋದಿಯವರ ವಿರುದ್ಧ ವಿರೋಧ ವ್ಯಕ್ತವಾಗುತ್ತಿದೆ. ರೈತ ಚಳವಳಿಯ ನಿಮಿತ್ತ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಮೂರು ಕೃಷಿ ಕಾನೂನುಗಳನ್ನು ಸರ್ಕಾರ ಹಿಂಪಡೆದ ನಂತರವೂ ಪಂಜಾಬ್‌ನ ರೈತರು ಮತ್ತು ಜನರ ಆಕ್ರೋಶ ಕಡಿಮೆಯಾಗುವಂತೆ ಕಾಣುತ್ತಿಲ್ಲ.

Latest article