ಅದೃಷ್ಟ ಯಾವಾಗ ಬೇಕಾದರೂ ತಿರುಗಬಹುದು. ಮುಂಬೈನ ಕುಟುಂಬವೊಂದರಲ್ಲೂ ಇದೇ ಘಟನೆ ನಡೆದಿದೆ. ಫ್ಯಾಷನ್ ಬ್ರ್ಯಾಂಡ್ ಚರಗ್ ದಿನ್ ಮಾಲೀಕರು 22 ವರ್ಷಗಳ ಹಿಂದೆ ಕಳೆದುಹೋಗಿದ್ದ ಚಿನ್ನವನ್ನು ವಾಪಸ್ ಪಡೆದಿದ್ದು, ಚಿನ್ನದ ಮೌಲ್ಯ 8 ಕೋಟಿ.
1998ರ ಮೇ 8ರಂದು ಕೊಲಾಬಾದಲ್ಲಿರುವ ಅರ್ಜನ್ ದಾಸ್ವಾನಿ ಅವರ ಮನೆಯಿಂದ ಶಸ್ತ್ರಸಜ್ಜಿತ ತಂಡವೊಂದು ಚಿನ್ನಾಭರಣ ದೋಚಿತ್ತು. ದುಷ್ಕರ್ಮಿಗಳು ಭದ್ರತಾ ಸಿಬ್ಬಂದಿಯನ್ನು ಥಳಿಸಿ, ಸೇಫ್ ಕೀಯನ್ನು ಕಿತ್ತುಕೊಂಡು, ನಂತರ ಗ್ಯಾಂಗ್ ದಾಸವಾಣಿ ಮತ್ತು ಅವರ ಹೆಂಡತಿಯನ್ನು ಕಟ್ಟಿಹಾಕಿ ದರೋಡೆ ನಡೆಸಿತ್ತು.
1998 ರಲ್ಲಿ, ಮೂವರು ಗ್ಯಾಂಗ್ ಆರೋಪಿಗಳನ್ನು ಹಿಡಿಯಲಾಯಿತು ಮತ್ತು ಅವರಿಂದ ಲೂಟಿ ಮಾಡಿದ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ವಿಚಾರಣೆಯ ನಂತರ, ಮೂವರನ್ನೂ 1999 ರಲ್ಲಿ ಬಿಡುಗಡೆ ಮಾಡಲಾಯಿತು. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅರ್ಜನ್ ದಾಸ್ವಾನಿ 2007 ರಲ್ಲಿ ನಿಧನರಾದರು.
ಜನವರಿ 5 ರಂದು ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಧೀಶರಾದ ಯು.ಜಿ.ಮೋರೆ ಅವರು ಚಿನ್ನವನ್ನು ಹಿಂದಿರುಗಿಸುವ ಆದೇಶ ನೀಡಿದರು, ಕಳುವಾದ ವಸ್ತುಗಳಲ್ಲಿ ರಾಣಿ ವಿಕ್ಟೋರಿಯಾ ಚಿತ್ರವಿರುವ ಚಿನ್ನದ ನಾಣ್ಯ, ಎರಡು ಚಿನ್ನದ ಬಳೆಗಳು, 1300 ಗ್ರಾಂ ಮತ್ತು 200 ಮಿಲಿಗ್ರಾಂ ತೂಕದ ಎರಡು ರಿಂಗುಗಳು ಸೇರಿವೆ. 13 ವರ್ಷಗಳ ಹಿಂದೆ ಇಡೀ ವಸ್ತುವಿನ ಬೆಲೆ 13 ಲಕ್ಷ ಆಗಿದ್ದು ಈಗ 8 ಕೋಟಿಗೆ ಏರಿಕೆಯಾಗಿದೆ. ರಾಜು ದಾಸ್ವಾನಿ ಅವರು ಈ ಆಸ್ತಿ ತನ್ನ ಕುಟುಂಬಕ್ಕೆ ಸೇರಿದ್ದು ಎಂದು ಸಾಬೀತುಪಡಿಸುವ ಬಿಲ್ಗಳು ಮತ್ತು ರಸೀದಿಗಳನ್ನು ಸಲ್ಲಿಸಿದ್ದರು.
ಪಬ್ಲಿಕ್ ಪ್ರಾಸಿಕ್ಯೂಟರ್ ಇಕ್ಬಾಲ್ ಸೋಲ್ಕರ್ ಮತ್ತು ಕೊಲಾಬಾ ಪೊಲೀಸ್ ಇನ್ಸ್ಪೆಕ್ಟರ್ ಸಂಜಯ್ ಡೋನರ್ ಅವರು ಚಿನ್ನವನ್ನು ಹಿಂದಿರುಗಿಸಲು ಯಾವುದೇ ತೊಂದರೆಯಿಲ್ಲ ಎಂದು ಹೇಳಿದ್ದಾರೆ.