ಯುವತಿಯ ಅತ್ಯಾಚಾರ ನಡೆಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಮಾಜಿ ಸೈನಿಕನ್ನ ನವದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮೋಹಾಲಿಯ ಹಸನ್ಪುರದಲ್ಲಿ ಈ ಘಟನೆ ನಡೆದಿದ್ದು ಆರೋಪಿ ಮಾಜಿ ಸೈನಿಕನನ್ನ ಬಂಧೀಸಿ ವಿಚಾರಣೆಗೊಳಪಡಿಸಿದ್ದಾರೆ. ಸೋಷಿಯಲ್ ನೆಟ್ ನಲ್ಲಿ ಮಾಜಿ ಸೈನಿಕ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸಬರ್ಜಿತ್ ಎಂಬ ಮಾಜಿ ಸೈನಿಕನಿಂದ ನಡೆದ ಕೃತ್ಯ ಇದು .ಪರಿಚಯವಿದ್ದ ಕಾರಣ ಯುವತಿ ಸಬರ್ಜಿತ್ ಬಳಿ ಹಣಕಾಸಿನ ನೆರವು ಕೇಳಿದ್ದಳು . ಇದಕ್ಕೆ ಒಪ್ಪಿದ ಸಬರ್ಜಿತ್ ,ಬಸ್ ನಿಲ್ದಾಣದಲ್ಲಿ ಭೇಟಿಯಾಗಿದ್ದ ನಂತ್ ಹೊಟೇಲ್ ಗೆ ಕರೆದುಕೊಂಡು ಹೋಗಿ ಅಲ್ಲಿ ಮತ್ತು ಬರುವ ಔಷಧಿ ಹಾಕಿ ಕೂಲ್ ಡ್ರಿಂಕ್ಸ್ ಕುಡಿಸಿದ್ದ ನಂತ್ ಆಕೆಯ ಮೇಲೆ ಅತ್ಯಾಚಾರವೆಸಗಿ ಆ ಫೋಟೋಗಳನ್ನೂ ತೆಗೆದುಕೊಂಡಿದ್ದ .ನಂತರ ಆ ಫೋಟೊವನ್ನ ತೋರಿಸಿ ತನಗೆ ಸಹಕಾರ ನೀಡುವಂತೆ ಪೀಡಿಸುತ್ತಿದ್ದ . ನಿರಾಕರಿಸಿದಕ್ಕೆ ಆಕೆಯ ಪ್ರಿಯಕರಿನಿಗೆ ಫೋಟೋಗಳನ್ನ ಕಳಿಸಿ ಆಗಬೇಕಾಗಿದ್ದ ಮದುವೆಯೂ ಕೆಡಿಸಿದ್ದ. ಈ ಹಿನ್ನಲೆ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ದೂರಿನನ್ವಯ ದೆಹಲಿ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.