Tuesday, October 26, 2021

ಮೊಟ್ಟೆ ಗಂಟಲಿನಲ್ಲಿ ಸಿಲುಕಿಕೊಂಡು ಮಹಿಳೆ ಸಾವು

Must read

ತೆಲಂಗಾಣ: ಮಹಿಳೆಯೊಬ್ಬರು ಮೊಟ್ಟೆ ತಿನ್ನುತ್ತಿದ್ದಾಗ ಅದು ಗಂಟಲಿನಲ್ಲಿ ಸಿಲುಕಿಕೊಂಡು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಾಗರ್ ಕರ್ನೂಲ್​ನಲ್ಲಿ ನಡೆದಿದೆ.

ನಾಗರ್​ ಕರ್ನೂಲ್​​ ಜಿಲ್ಲೆಯ ನೇರಳಪಲ್ಲಿಯಲ್ಲಿ ಈ ಘಟನೆ ನಡೆದಿದೆ. 50 ವರ್ಷದ ನೀಲಮ್ಮ ಎಂಬ ಮಹಿಳೆ ಊಟ ಮಾಡಿದ ನಂತರ ಬೇಯಿಸಿದ ಮೊಟ್ಟೆ ತಿನ್ನಲು ಬಾಯಿಯೊಳಗೆ ಹಾಕಿಕೊಂಡಿದ್ದಾರೆ. ಈ ವೇಳೆ ಅದು ನೇರವಾಗಿ ಗಂಟಲಿನ ಭಾಗದಲ್ಲಿ ಸಿಲುಕಿಕೊಂಡಿದೆ. ಇದರಿಂದ ಕ್ಷಣಾರ್ಧದಲ್ಲೇ ಉಸಿರುಗಟ್ಟಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

More articles

Latest article