Sunday, October 2, 2022

ದೀದಿ ನಾಡಲ್ಲಿ ಬಿಜೆಪಿ ಹೈಡ್ರಾಮಾ..!

Must read

ಪಶ್ಚಿಮ ಬಂಗಾಳ ಇಂದು ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿದೆ. ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಅಭಿಯಾನದಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ. ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಾಯಕ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿವಾಸ ಹಾಗೂ ಕಚೇರಿ ನಬಣ್ಣದತ್ತ ಪ್ರತಿಭಟನೆ ಱಲಿ ಸಾಗುತ್ತಿತ್ತು. ಇದೇ ವೇಳೆ ಗಲಾಟೆ ಉಂಟಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾದ-ವಾಗ್ವಾದ ನಡೆದಿದೆ.

ಇನ್ನು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಪ್ರತಿಭಟನೆಯನ್ನ ನಿಯಂತ್ರಣಕ್ಕೆ ತರುವ ಹಿನ್ನೆಲೆ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ. ಅಷ್ಟೇ ಅಲ್ಲದೇ ಟೀಯರ್​ ಗ್ಯಾಸ್​ ಬಳಕೆ ಮಾಡಿದ್ದಾರೆ. ಈ ವೇಳೆ ಹಲವು ಉದ್ರಿಕ್ತ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಜೊತೆಗೆ ಪ್ರತಿಭಟನಾಕಾರರನ್ನ ತಡೆಯುವ ಸಲುವಾಗಿ ಬಿಜೆಪಿ ನಾಯಕ ಸುವೇಂದು ಸೇರಿದಂತೆ ಹಲವು ಗಣ್ಯ ನಾಯಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Latest article