ನಿದ್ರೆಯ ಮಂಪರಿನಲ್ಲಿ ಇಲಿ ಪಾಷಾಣದಿಂದ ಹಲ್ಲುಜ್ಜಿದ ಯುವತಿ ಸಾವು

ನಿದ್ರೆಯ ಮಂಪರಿನಲ್ಲಿ ಇಲಿ ಪಾಷಾಣದಿಂದ ಹಲ್ಲುಜ್ಜಿದ ಯುವತಿ ಸಾವು

ಅರೆ ನಿದ್ರಾವಸ್ಥೆಯಲ್ಲಿ ಏನೆಲ್ಲಾ ಅವಘಡ ನಡೆಯುತ್ತೆ ಎನ್ನೋದಕ್ಕೆ ಈ ಘಟನೆಯೇ ಸಾಕ್ಷಿ.18 ವರ್ಷದ ಹುಡುಗಿಯೊಬ್ಬಳು ಟೂತ್ ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣದಿಂದ ಹಲ್ಲುಜ್ಜಿ ಮೃತಪಟ್ಟಿರುವ ಘಟನೆ ಮುಂಬೈನ ಧಾರಾವಿಯಲ್ಲಿ ನಡೆದಿದೆ.

ಸೆಪ್ಟೆಂಬರ್ 3ರಂದು ಬೆಳಿಗ್ಗೆ 10ಗಂಟೆ ಸುಮಾರಿಗೆ ಅಫ್ಸಾನಾ ಖಾನ್ ಎಂಬ ಯುವತಿ ಅರೆ ನಿದ್ರಾವಸ್ಥೆಯಲ್ಲಿಯೇ ಹಲ್ಲುಜ್ಜಲು ತೆರಳಿದ್ದಾಳೆ. ಈ ವೇಳೆ ಟೂತ್​ ಪೇಸ್ಟ್​ ಎಂದು ಪಕ್ಕದಲ್ಲಿದ್ದ ಇಲಿ ಪಾಷಾಣದ ಕ್ರೀಮ್​ ಅನ್ನು ಬ್ರಶ್​ ಹಾಕಿಕೊಂಡು ಹಲ್ಲುಜ್ಜಿದ್ದಾಳೆ.

ಕೂಡಲೇ ರುಚಿ ಮತ್ತು ವಾಸನೆಯನ್ನು ಅರಿತ ಯುವತಿ, ಬಾಯನ್ನು ಸ್ವಚ್ಫಗೊಳಿಸಿಕೊಂಡಿದ್ದಾಳೆ. ಬಳಿಕ ಎಂದಿನಂತೆ ದಿನಚರಿ ಆರಂಭಿಸಿದ್ದಾಳೆ. ಆದರೆ, ಕೆಲವೇ ಹೊತ್ತಲ್ಲಿ ಅವಳಿಗೆ ತಲೆತಿರುಗಿದಂತೆ ಭಾಸವಾಗಿದೆ. ಈ ಬಗ್ಗೆ ಹೇಳಿದರೆ ಮನೆಯವರು ಬೈತ್ತಾರೆ ಎಂಬ ಭಯದಿಂದ ಹೊಟ್ಟೆ ನೋವಿನ ಔಷಧಿ ಸೇವಿಸಿದ್ದಾಳೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕುಟುಂಬಸ್ಥರು ಅಫ್ಸಾನಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರಿಗೆ ಏನಾಗಿದೆ ಎಂದು ಪತ್ತೆ ಹಚ್ಚುವುದೇ ಸವಾಲಿನ ಸಂಗತಿಯಾಗಿತ್ತು. ಅಲ್ಲಿಂದ ಬೇರೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನಿರಂತರ ಹದಗೆಡುತ್ತಿರುವ ಆರೋಗ್ಯದ ಬಗ್ಗೆ ಭಯಗೊಂಡು ಕೊನೆಗೆ ಯುವತಿ ತನ್ನ ತಾಯಿಗೆ ವಿಷಯ ತಿಳಿಸುತ್ತಾಳೆ. ಆದರೆ, ಅದಾಗಲೇ ಆಕೆಯ ಆರೋಗ್ಯ ತುಂಬಾ ಕ್ಷೀಣಿಸಿತ್ತು. ಸೆಪ್ಟೆಂಬರ್ 12ರಂದು ಅಪ್ಸಾನಾಳನ್ನು ಸರ್ ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.

Related Stories

No stories found.
TV 5 Kannada
tv5kannada.com