ಕಪ್ಪು ಕೋರ್ಟ್ ಧರಿಸಿದ ಮಾತ್ರಕ್ಕೆ... ಎಂದು ವಕೀಲರಿಗೇ ಜಾಡಿಸಿದ ಸುಪ್ರೀಂ ಕೋರ್ಟ್

ಕಪ್ಪು ಕೋರ್ಟ್ ಧರಿಸಿದ ಮಾತ್ರಕ್ಕೆ... ಎಂದು ವಕೀಲರಿಗೇ ಜಾಡಿಸಿದ ಸುಪ್ರೀಂ ಕೋರ್ಟ್
Worawee Meepian

ಹೊಸದಿಲ್ಲಿ: ಸತ್ತ ವಕೀಲರ ಕುಟುಂಬಗಳಿಗೆ ಪರಿಹಾರ ನೀಡುವಂತೆ "ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ" ಸಲ್ಲಿಸಿದ್ದಕ್ಕಾಗಿ ವಕೀಲರ ವಿರುದ್ಧ ವಾಗ್ದಾಳಿ ನಡೆಸಿದ ನ್ಯಾಯಾಲಯ, ವಕೀಲರು ಬೋಗಸ್ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸುವುದನ್ನು ನಿಲ್ಲಿಸುವ ಸಮಯ ಬಂದಿದೆ ಎಂದಿದ್ದು, ಅರ್ಜಿದಾರರಾದ ಪ್ರದೀಪ್ ಕುಮಾರ್ ಯಾದವ್ ಅಂತಹ ವಕೀಲ ಕುಟುಂಬಗಳಿಗೆ 50 ಲಕ್ಷಗಳನ್ನು ನೀಡುವಂತೆ ತಮ್ಮ PIL ನಲ್ಲಿ ಕೋರಿದ್ದರು.

ಶ್ರೀ ಯಾದವ್ ಅವರ ಮನವಿಯು ಉನ್ನತ ನ್ಯಾಯಾಲಯದ ನ್ಯಾಯಾಧೀಶರಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದು, ವಕೀಲರು "ಕಪ್ಪು ಕೋಟ್" ನಲ್ಲಿದ್ದ ಮಾತ್ರಕ್ಕೆ ನಿಮಗೆ ವಿನಾಯಿತಿಯಿಲ್ಲ ಎಂದಿದ್ದು

"ವಕೀಲರು ಈ ನಕಲಿ ಪಿಐಎಲ್‌ಗಳನ್ನು ನಿಲ್ಲಿಸಬೇಕಾದ ಸಮಯ ಬಂದಿದೆ. ಇದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿದೆ ಮತ್ತು ನೀವು ಕಪ್ಪು ಕೋಟ್‌ನಲ್ಲಿರುವುದರಿಂದ, ನಿಮ್ಮ ಜೀವವು ಇತರರಿಗಿಂತ ಹೆಚ್ಚು ಅಮೂಲ್ಯವಾದುದು ಎಂದರ್ಥವಲ್ಲ!" ಉನ್ನತ ನ್ಯಾಯಾಲಯ ಹೇಳಿದೆ.

Related Stories

No stories found.
TV 5 Kannada
tv5kannada.com