Monday, January 30, 2023

ವಿಶ್ವದಾದ್ಯಂತ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕೊರೊನಾ

Must read

ವಿಶ್ವದಾದ್ಯಂತ ಕೊರೊನಾ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಹಿನ್ನಲೆ ಶಿಕ್ಷಣ ಸಂಸ್ಥೆಗಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಇನ್ನು ಸರ್ಕಾರ ಸಾರ್ವಜನಿಕರಿಗೆ ಅಥವಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗೈಡ್ಸ್ ಲೈನ್ಸ್ ಬಿಡುಗಡೆ ಮಾಡುವ ಮುನ್ನವೇ ಖಾಸಗಿ ಶಾಲೆಗಳು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಇಂದು ಖಾಸಗಿ ಶಾಲೆಯ ಆಡಳಿತ ಮಂಡಳಿಗಳ ಜೊತೆ ರುಪ್ಸಾ ಪದಾಧಿಕಾರಿಗಳು ಸಭೆಯನ್ನು ನಡೆಸಿದ್ದಾರೆ. ರುಪ್ಸಾ ಸಂಘಟನೆ ಅಡಿಯಲ್ಲಿ ರಾಜ್ಯದಲ್ಲಿ 13 ಸಾವಿರ ಶಾಲೆಗಳು ನೋಂದಣಿ ಮಾಡಿಕೊಂಡಿದ್ದು, ಈ ಎಲ್ಲಾ ಶಾಲಾ ಆಡಳಿತ ಸಿಬ್ಬಂದಿಗಳ ಜೊತೆ ರುಪ್ಸಾ ಪದಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮತ್ತೆ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರದ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ. ಇನ್ನು ಚರ್ಚೆ ನಡೆಿಸಿದ ಬಳಿಕ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯಗೊಳಿಸಿದ್ದಾರೆ. ಇನ್ನು ಅವಶ್ಯಕತೆ ಇದ್ರೆ ಆನ್ ಲೈನ್ ಕ್ಲಾಸ್ ತರಗತಿ ನಡೆಸುವ ಬಗ್ಗೆಯೂ ಚರ್ಚೆಯನ್ನು ನಡೆಸಿದ್ದಾರೆ.

Latest article