ನಿಫ್ಟಿ ಚೇತರಿಕೆ ಲಾಭಗಳಿಸಿದ ಇಂಡಸ್ ಇಂಡ್ ಬ್ಯಾಂಕ್

ನಿಫ್ಟಿ ಚೇತರಿಕೆ ಲಾಭಗಳಿಸಿದ ಇಂಡಸ್ ಇಂಡ್ ಬ್ಯಾಂಕ್

ಮುಂಬೈ: ಜಾಗತಿಕ ಷೇರುಪೇಟೆಯ ಬಿರುಸಿನ ವಹಿವಾಟಿನ ಪರಿಣಾಮ ಮಂಗಳವಾರ (ಸೆ.14) ಮುಂಬಯಿ ಷೇರುಮಾರುಕಟ್ಟೆಯ ಸಂವೇದಿ ಸೂಚ್ಯಂಕ 69 ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ.

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 69 ಅಂಕಗಳ ಏರಿಕೆಯೊಂದಿಗೆ 58,247 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಇದೇ ರೀತಿ ನಿಫ್ಟಿ ಕೂಡಾ 25 ಅಂಕ ಏರಿಕೆಯೊಂದಿಗೆ 17,380 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ.

ನಿಫ್ಟಿ ಏರಿಕೆಯಿಂದ ಟಿಸಿಎಸ್, ಇಂಡಸ್ ಇಂಡ್ ಬ್ಯಾಂಕ್, ಐಟಿ, ಕೋಟಕ್ ಮಹೀಂದ್ರ ಬ್ಯಾಂಕ್, ಎಲ್​ಆಂಡ್ ಟಿ ಮತ್ತು ಎಚ್​ಸಿಎಲ್​ಟೆಕ್, ಆಟೋ ಷೇರುಗಳು ಲಾಭಗಳಿಸಿವೆ. ನೆಸ್ಲೆ ಇಂಡಿಯಾ, ಆಲ್ಟ್ರಾಟೆಕ್ ಸಿಮೆಂಟ್, ಎಚ್​ಯುಎಲ್, ಎಚ್​ಡಿಎಫ್​ಸಿ, ಟಾಟಾ ಸ್ಟೀಲ್, ಬಜಾಜ್ ಫಿನ್ ಸರ್ವ್, ಇನ್ಫೋಸಿಸ್ ಷೇರುಗಳು ನಷ್ಟ ಕಂಡಿವೆ.

Related Stories

No stories found.
TV 5 Kannada
tv5kannada.com