Thursday, October 6, 2022

ಅಳಿವಿನಂಚಿನ ಚೋಳ ಜನಾಂಗದ ವ್ಯಕ್ತಿ ಕಾಡಾನೆಗೆ ಬಲಿ

Must read

20 ವರ್ಷಗಳ ಹಿಂದೆ ಜನಾಂಗದ ಸಂಸ್ಕೃತಿಯನ್ನ ಅರಿಯಲು ರಾಷ್ಟ್ರಪತಿಗಳಿಂದ ಆಹ್ವಾನಿತರಾಗಿದ್ದ ವ್ಯಕ್ತಿ ಕಾಡಾನೆ ತುಳಿತಕ್ಕೆ ಸಾವನ್ನಪ್ಪಿದ್ದಾರೆ.

ಅಳಿವಿನಂಚಿನಲ್ಲಿರುವ ಬುಡಕಟ್ಟು ಜನಾಂಗದಲ್ಲಿ ಚೋಳ ಬುಡಕಟ್ಟು ಜನಾಂಗ ಕೂಡ ಒಂದಾಗಿದೆ. ಅಂದು ರಾಷ್ಟ್ರಪತಿಗಳ ಮುಂದೆ ತಮ್ಮ ಜನಾಂಗದ ಸಂಸ್ಕೃತಿ ತಿಳಿಸಿಕೊಟ್ಟಿದ್ದ ಕರಿಂಬುಜ ಮಥನ್ ಸಾವನ್ನಪ್ಪಿದ್ದಾರೆ.

ಕೇರಳದ ಮಲಪ್ಪುರಂ ಕಾಡಿನಲ್ಲಿ ನಡೆದ ಘಟನೆ ಇದು . ಕುಟುಂಬಸ್ಥರ ಜೊತೆ ಮನೆಗೆ ರೇಷನದ ತೆಗದುಕೊಂಡು ಹೋಗುವ ಸಂಧರ್ಭದಲ್ಲಿ ಕಾಡಾನೆ ದಾಳಿ ಮಾಡಿದೆ. ಈ ವೇಳೆ ತಪ್ಪಿಸಿಕೊಳ್ಳಲು ಸಾಧ್ಯವಾಗದ ಹಿನ್ನಲೆ ಕಕರಿಂಬುಕಜ್ ಸಾವನ್ನಪ್ಪಿದ್ದಾರೆ. ಇನ್ನು ಇವರ ಜನಾಂಗ ಆಳವಾದ ಗುಹೆಗಳಲ್ಲಿ ವಾಸ ಮಾಡುತ್ತಿದೆ. ಇದೊಂದೇ ಜನಾಂಗ ಈ ರೀತಿಯ ಬದುಕನ್ನ ನಡೆಸುತ್ತದೆ. ಹೀಗಾಗಿ ಚೋಳ ಬುಡಕಟ್ಟು ಜನಾಂಗ ವಿಭಿನ್ನ ಎನಿಸಿಕೊಂಡಿದೆ. ನೂರಾರು ಜನರಿರುವ ಈ ಜನಾಂಗ ಕಾಡಿನಲ್ಲೇ ವಾಸ ಮಾಡುತ್ತಿದೆ. ಅಳಿವಿನಂಚಿನಲ್ಲಿರುವ ಈ ಚೋಳ ಜನಾಂಗ ಅಂತರ್ ರಾಷ್ಟ್ಟೀಯ ಕಾರ್ಯಕ್ರಮದಲ್ಲೂ ಭಾಗವಹಿಸಿದೆ.

Latest article