Thursday, January 20, 2022

ಡಿಸೆಂಬರ್ 4ಕ್ಕೆ ರೈತ ಹೋರಾಟ ಅಂತ್ಯ: ಕ್ಯಾಪ್ಟನ್ ಅಮರಿಂದರ್ ಸಿಂಗ್..!

Must read

ಹರಿಯಾಣ ಸಿಎಂ ಮನೋಹರ್ ಲಾಲ್ ಅವರನ್ನು ಭೇಟಿ ಮಾಡಲು ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇದ್ದಕ್ಕಿದ್ದಂತೆ ಅವರ ಕಚೇರಿಗೆ ಆಗಮಿಸಿದರು. ಕ್ಯಾಪ್ಟನ್ ಇದನ್ನು ಔಪಚಾರಿಕ ಸಭೆ ಎಂದು ಬಣ್ಣಿಸಿದರು.

ಸಭೆಯ ನಂತರ ವರದಿಗಾರರೊಂದಿಗೆ ಮಾತನಾಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಕಿಸಾನ್ ಆಂದೋಲನಾ ಡಿಸೆಂಬರ್ 4ರಂದು ಕೊನೆಗೊಳ್ಳುತ್ತದೆ. ಅನೇಕ ನಾಯಕರು, ರೈತ ನಾಯಕರು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರಿಂದ ಈ ಮಾಹಿತಿ ಪಡೆದುಕೊಂಡಿದ್ದಾಗಿ ಅವರು ಹೇಳಿದರು.

ಇನ್ನೂ ರೈತರ 6-7 ಸಮಸ್ಯೆಗಳಿವೆ. ಅವುಗಳನ್ನು ಕೇಂದ್ರ ಸರ್ಕಾರವೂ ಒಪ್ಪುತ್ತದೆ. ಯಾವುದೇ ಸಮಸ್ಯೆ ಉಳಿದಿಲ್ಲ. ಕ್ಯಾಪ್ಟನ್ ಅವರು ಕೆಲವು ರೈತ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಪ್ರತಿಭಟನೆಯನ್ನು ಕೊನೆಗೊಳಿಸುವ ಬಗ್ಗೆ ಡಿಸೆಂಬರ್ 4ರಂದು ನಿರ್ಧಾರ ತೆಗೆದುಕೊಳ್ಳಬಹುದು. ಹೋರಾಟದ ಬಗ್ಗೆ ರೈತ ನಾಯಕರೊಂದಿಗೆ ಯಾವುದೇ ಮಾತುಕತೆ ಮಾಡದಿದ್ದರೂ, ಕೆಲವು ರೈತ ನಾಯಕರು ಖಂಡಿತವಾಗಿಯೂ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಂಜಾಬ್​ನಲ್ಲಿ ಬಿಜೆಪಿಯೊಂದಿಗೆ ಮೈತ್ರಿಯ ವಿಷಯಕ್ಕೆ ಸಂಬಂಧಿಸಿದಂತೆ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ದೆಹಲಿಗೆ ಬಂದಾಗಲೆಲ್ಲಾ ಮೈತ್ರಿಯ ಬಗ್ಗೆ ಬಿಜೆಪಿಯ ಉನ್ನತ ನಾಯಕತ್ವದೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು. ನವಜೋತ್ ಸಿಂಗ್ ಸಿಧು ಈಗೊಂದು, ಆಗೊಂದು ಮಾತನಾಡುತ್ತಾರೆ. ಅವರ ಬಗ್ಗೆ ಹೆಚ್ಚು ಹೇಳಲಿಲ್ಲ ಎಂದರು.

Latest article