Tuesday, May 17, 2022

ದೇಶ ವಿಭಜನೆ ಸಂದರ್ಭದಲ್ಲಿ ದೂರಾದ ಸಹೋದರರು 74 ವರ್ಷಗಳ ಬಳಿಕ ಜೊತೆಯಾದರು..!

Must read

ಹುಟ್ಟುತ್ತ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಯಾದಿಗಳು ಎನ್ನುವ ಮಾತಿದೆ. ಇತ್ತೀಚೆಗಿನ ದಿನಗಳಲ್ಲಿ ಆಸ್ತಿ ಅಥವಾ ಇನ್ಯಾವುದೋ ವಿಚಾರಕ್ಕೆ ಸ್ವಂತ ಸಹೋದದರು ಕಿತ್ತಾಡುವ ಎಷ್ಟೋ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಆದರೆ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಸೆರೆಯಾದ ದೃಶ್ಯವೊಂದು ಎಂಥವರಾ ಮನಸ್ಸು ಕರಗಿಸುವಂತಿದೆ.

ಅಕ್ಕ-ತಂಗಿ, ಅಣ್ಣ-ತಮ್ಮ ಈ ಸಂಬಂಧಗಳು ಎಂದೂ ಬೆಲೆ ಕಟ್ಟಲಾಗದು. ಒಂದೇ ತಾಯಿಯ ಗರ್ಭದಲ್ಲಿ ಜಾಗ ಪಡೆದ ಈ ರಕ್ತ ಸಂಬಂಧ ಅತ್ಯಮೂಲ್ಯವಾದುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಪಾಕಿಸ್ತಾನದಲ್ಲಿ ಒಬ್ಬರು, ಭಾರತದಲ್ಲಿ ಒಬ್ಬರು ವಾಸಿಸುತ್ತಿದ್ದ ಇಬ್ಬರು ಇಳಿ ವಯಸ್ಸಿನ ಸಹೋದದರು 74 ವರ್ಷಗಳ ಬಳಿಕ ಕರ್ತಾರ್‌ಪುರ ಕಾರಿಡಾರ್‌ ಭೇಟಿಯಾಗಿದ್ದಾರೆ.

ಮೊಹಮ್ಮದ್ ಸಿದ್ದಿಕ್ ಮತ್ತು ಅವರ ಹಿರಿಯ ಸಹೋದರ ಹಬೀಬ್ 1947ರಲ್ಲಿ ದೇಶ ವಿಭಜನೆಗೊಂಡಾಗ ಇವರಿಬ್ಬರು ದೂರವಾಗಿದ್ದರು. ವಿಭಜನೆಯ ಸಮಯದಲ್ಲಿ ಮಗುವಾಗಿದ್ದ ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದಲ್ಲಿ ಉಳಿದುಕೊಂಡರು ಮತ್ತು ಈಗ ಇವರು ಫೈಸ್ಲಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಇವರ ಹಿರಿಯ ಸಹೋದರ ಹಬೀಬ್ ಭಾರತದ ಭಾಗದಲ್ಲಿ ಬೆಳೆದಿದ್ದರು. ಹೀಗೆ ಪರಸ್ಪರ ದೂರವಾಗಿದ್ದ ಈ ಸೋದರರು ಈಗ ಬರೋಬ್ಬರಿ 74 ವರ್ಷಗಳ ನಂತರ ಭೇಟಿಯಾಗಿದ್ದಾರೆ. ಸದ್ಯ ಈ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

Latest article