ಬಿಜೆಪಿ ಸಂಸದ ಅರ್ಜುನ್​ ಸಿಂಗ್​ ಮನೆ ಮೇಲೆ ಮತ್ತೆ ಬಾಂಬ್ ದಾಳಿ

ಬಿಜೆಪಿ ಸಂಸದ ಅರ್ಜುನ್​ ಸಿಂಗ್​ ಮನೆ ಮೇಲೆ ಮತ್ತೆ ಬಾಂಬ್ ದಾಳಿ

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸದ ಮೇಲೆ ಮತ್ತೆ ಕಚ್ಚಾ ಬಾಂಬ್ ದಾಳಿ ನಡೆಸಲಾಗಿದೆ.

ಕಳೆದ ವಾರವಷ್ಟೇ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಸಂಸದ ಅರ್ಜುನ್ ಸಿಂಗ್ ನಿವಾಸದ ಮೇಲೆ ಬಾಂಬ್​ ದಾಳಿ ನಡೆಸಿದ್ದರು. ಈ ದಾಳಿಯ ಬಗ್ಗೆ ತನಿಖೆ ನಡೆಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್​ಐಎ) ವಹಿಸಲಾಗಿತ್ತು. ಆದರೆ, ತನಿಖೆ ಪೂರ್ಣಗೊಳ್ಳುವ ಮುನ್ನವೇ ಮತ್ತೆ ಸಂಸದ ಅರ್ಜುನ್​ ಸಿಂಗ್​ ನಿವಾಸದ ಮೇಲೆ ಕಚ್ಚಾ ಬಾಂಬ್​ ದಾಳಿ ನಡೆಸಲಾಗಿದೆ.

ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅರ್ಜುನ್ ಸಿಂಗ್ ನಿವಾಸಕ್ಕೆ ಬಾಂಬ್ ನಿಷ್ಕ್ರೀಯ ದಳ ಆಗಮಿಸಿದ್ದು, ಬಾಂಬ್ ಎಸೆದ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಘಟನೆ ಬಗ್ಗೆ ಮಾತನಾಡಿರುವ ಅರ್ಜುನ್ ಸಿಂಗ್, ದಾಳಿ ಮಾಡಿದ ಗೂಂಡಾಗಳಿಗೆ ಟಿಎಂಸಿ ರಕ್ಷಣೆ ನೀಡುತ್ತಿದೆ ಎಂದು ಆರೋಪ ಮಾಡಿದ್ದಾರೆ. ಅರ್ಜುನ್ ಸಿಂಗ್ ಆರೋಪವನ್ನು​ ಟಿಎಂಸಿ ನಾಯಕರು ನಿರಾಕರಿಸಿದ್ದು, ನಮ್ಮಲ್ಲಿ ಯಾವುದೇ ಕೊಲೆ ಸಂಚು ರೂಪಿಸುವ ಯಾವುದೇ ನಾಯಕರಿಲ್ಲವೆಂದು ಟಾಂಗ್​ ನೀಡಿದ್ದಾರೆ. ಅರ್ಜುನ್​ ಸಿಂಗ್​ ಬಿಜೆಪಿ ಸೇರುವ ಮೊದಲು ಟಿಎಂಸಿಯಲ್ಲಿದ್ದರು.

Related Stories

No stories found.
TV 5 Kannada
tv5kannada.com