Sunday, October 2, 2022

‘ಕಮಲ’ ಹಿಡಿಯಲು ‘ಕ್ಯಾಪ್ಟನ್’​ ತಯಾರಿ

Must read

ಪಂಜಾಬ್​ನ ಮಾಜಿ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿ ಪಂಜಾಬ್​ ಲೋಕ ಕಾಂಗ್ರೆಸ್​ ಎಂಬ ನೂತನ ಪಕ್ಷ ಸ್ಥಾಪಿಸಿದ್ದ ಅಮರೀಂದರ್​ ಸಿಂಗ್​ ಸದ್ಯ ತಮ್ಮ ಪಕ್ಷವನ್ನ ತೊರೆದು ಬಿಜೆಪಿಗೆ ಸೇರಲು ತಯಾರಿ ನಡೆಸಿದ್ದಾರೆ. ಇಂದು ಸಂಜೆ 4.30ಕ್ಕೆ ಬಿಜೆಪಿ ಸೇರಲಿರುವ ಅಮರೀಂದರ್​ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾರನ್ನ ಭೇಟಿಯಾಗಿದ್ದಾರೆ. ಅಮರೀಂದರ್​ ಸಿಂಗ್​ ತಮ್ಮ ನೂತನ ಪಕ್ಷ ಪಿಎಲ್​ಸಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವುದಾಗಿ ಹೇಳಿಕೊಂಡಿದ್ದಾರೆ.
ಇನ್ನು ಅಮರೀಂದರ್​ ಸಿಂಗ್​ ಬಿಜೆಪಿ ಸೇರ್ಪಡೆಗೊಂಡ ನಂತರ ಪಕ್ಷದಲ್ಲಿ ಅವರಿಗೆ ಪ್ರಮುಖ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ. ಕಳೆದ ವರ್ಷ ಸೆಪ್ಟಂಬರ್​ನಲ್ಲಿ ಪಂಜಾಬ್​ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದ ಅಮರೀಂದರ್​ ಸಿಂಗ್​, ನಂತರ ನೂತನ ಪಕ್ಷ ಸ್ಥಾಪಿಸುವ ಮೂಲಕ ಕಾಂಗ್ರೆಸ್​ ವಿರುದ್ಧ ಅಸಮಾಧಾನ ಹೊರಹಾಕಿದ್ದರು. 80 ವರ್ಷದ ಅಮರೀಂದರ್​ ಸಿಂಗ್​ 2 ಬಾರಿ ಪಂಜಾನ್​ನ ಸಿಎಂ ಆಗಿದ್ದು, ಇದೀಗ ಭಾರತೀಯ ಜನತಾ ಪಕ್ಷ ಸೇರುತ್ತಿರುವುದು ಅವರ ರಾಜಕೀಯ ಜೀವನದ ಮಹತ್ವದ ಬೆಳವಣಿಗೆಗಳಲ್ಲಿ ಒಂದಾಗಿದೆ.

Latest article