Friday, January 21, 2022

5 ವರ್ಷದಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ಕೋವಿಶೀಲ್ಡ್ ಪಡೆದ ನಂತರ ನಡೆದಾಡಿದ..!

Must read

ಬೊಕಾರೊ (ಜಾರ್ಖಂಡ್‌): ಐದು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಂತರ ಚೇತರಿಸಿಕೊಳ್ಳದೇ ಹಾಸಿಗೆ ಹಿಡಿದಿದ್ದ ಜಾರ್ಖಂಡ್‌ನ 55 ವರ್ಷದ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದ ನಂತರ ನಡೆಯಲು ಮತ್ತು ಮಾತನಾಡಲು ಪ್ರಾರಂಭಿಸಿದರು ಎಂದು ವೈದ್ಯರು ತಿಳಿಸಿದ್ದಾರೆ.

ಈ ಪವಾಡ ಚೇತರಿಕೆಯಿಂದ ಆಶ್ಚಯಗೊಂಡಿರುವ ಜಾರ್ಖಂಡ್ ಸರ್ಕಾರ, ತನಿಖೆಗಾಗಿ ಮೂವರು ಸದಸ್ಯರ ವೈದ್ಯಕೀಯ ತಂಡವನ್ನು ರಚಿಸಿದೆ. ಬೊಕಾರೊ ಜಿಲ್ಲೆಯ ಪೀಟರ್‌ವಾರ್ ಬ್ಲಾಕ್‌ನ ಉತ್ತರಾಸರಾ ಪಂಚಾಯತ್ ವ್ಯಾಪ್ತಿಯ ಸಲ್ಗಾಡಿಹ್ ಗ್ರಾಮದ ನಿವಾಸಿ ದುಲರ್‌ಚಂದ್ ಮುಂಡಾ ಎಂಬುವವರು 5 ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದರು. ಅಪಘಾತದ ಬಳಿಕ ಅವರಿಗೆ ನಡೆಯಲು ಹಾಗೂ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ.

ಅಂಗನವಾಡಿ ಕಾರ್ಯಕರ್ತೆಯರು ಜನವರಿ 4ರಂದು ಮುಂಡಾಗೆ ಕೋವಿಶೀಲ್ಡ್ ಲಸಿಕೆಯನ್ನು ನೀಡಿದ್ದರು. ಮರುದಿನ, ಮುಂಡಾ ಅವರನ್ನು ನೋಡಿದ ಕುಟುಂಬಸ್ಥರಿಗೆ ಆಶ್ಚರ್ಯ ಕಾದಿತ್ತು. ಯಾಕೆಂದರೆ, ಮುಂಡಾ ನಡೆದಾಡಲಾರಂಭಿಸಿದ್ದರು, ಮಾತನಾಡಲಾರಂಭಿಸಿದ್ದರು. ವೈದ್ಯಕೀಯವಾಗಿ ಇದು ಅಧ್ಯಯನಯೋಗ್ಯ ಪ್ರಕರಣ ಎಂದು ಪೀಟರ್ವಾರ್ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಡಾ ಅಲ್ಬೆಲಾ ಕೆರ್ಕೆಟ್ಟಾ ತಿಳಿಸಿದ್ದಾರೆ.

Latest article