Sunday, October 2, 2022

ಐಸಿಸ್ ನಿಂದ ಬಾಂಬ್ ಸ್ಫೋಟಿಸಿದ್ದ ಮೊದಲ ಭಾರತೀಯ ಬೆಂಗಳೂರಿನ ಟೆಕ್ಕಿ..!

Must read

ಹೌದು ಈ ಕುರಿತ ಸ್ಫೋಟಕ ಮಾಹಿತಿ ಪ್ರಕಟಿಸಿರುವ ಐಸಿಸ್ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ.
2016 ಲಿಬಿಯಾದಲ್ಲಿ ಸ್ಫೋಟಗೊಂಡಿದ್ದ ಬಾಂಬ್ ಘಟನೆಯಲ್ಲಿ ಹಲವರು ಸಾವನ್ನಪ್ಪಿದ್ದರು ಎನ್ನಲಾಗಿದೆ. ಆದ್ರೆ ಈ ಸ್ಫೋಟದ ಹಿಂದಿದ್ದ ಐಸಿಸ್ ಉಗ್ರ ಭಾರತೀಯ ಎನ್ನುವ ಮಾಹಿತಿ ಈಗ ಹೊರ ಬಿದ್ದಿದ್ದು ಕೇರಳ ಮೂಲದ ಬಾಂಬರ್ ನಿಂದ ಕೃತ್ಯ ಎಸಗಲಾಗಿತ್ತು ಎಂದು ಹೇಳಲಾಗಿದೆ.

ಈ ಉಗ್ರನಿಗಿತ್ತು ಬೆಂಗಳೂರಿನ‌ ನಂಟು..!

2015ರಲ್ಲಿ ಬೆಂಗಳೂರಿನಿಂದ ದುಬೈಗೆ ತೆರಳಿದ್ದ ಬಾಂಬರ್ ಎಂದು ಹೇಳಲಾಗಿದ್ದು, 2015ಕ್ಕೂ ಮುಂಚೆ ಕೆಲ ವರ್ಷಗಳ ಕಾಲ ಬೆಂಗಳೂರಿನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಬೆಂಗಳೂರಿನಿಂದಲೇ ಉಗ್ರರ ಕಾಂಟ್ಯಾಕ್ಟ್. ಸೋಷಿಯಲ್ ಮೀಡಿಯಾ ಮೂಲಕ ದುಬೈನ ಸ್ಲೀಪರ್ ಸೆಲ್ ಗಳ ಸಂಪರ್ಕ ಮಾಡಿದ್ದ ಮತ್ತು ಅವರ ಸಂಪರ್ಕದಿಂದ ಉಗ್ರ ಚಟುವಟಿಕೆಗಳ ಬಗ್ಗೆ ತರಬೇತಿ ಪಡೆದಿದ್ದ ಎನ್ನಲಾಗಿದೆ. ನಂತರ ಲಿಬಿಯಾಗೆ ಹೋಗಿ ಬಾಂಬ್ ಸ್ಫೋಟಿಸಿ ಹಲವರನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ.

ಈಗ ಅವನ ಬಗ್ಗೆ ಹೊಗಳಿ ಐಸಿಸ್ ನ ವಾಯ್ಸ್ ಆಫ ಖೊರಾಸನ್ ನಲ್ಲಿ ಲೇಖನ ಪ್ರಕಟಿಸಿರೋ ಐಸಿಸ್ ಬೆಂಗಳೂರಿಗರ ನಿದ್ದೆಗೆಡುವಂತೆ ಮಾಡಿದೆ.

Latest article