Tuesday, October 26, 2021

ಆರ್ಯನ್ ಖಾನ್​ಗೆ ಜೈಲೇ ಗತಿ: ಜಾಮೀನು ಅರ್ಜಿ ತೀರ್ಪು ಮುಂದೂಡಿದ ಕೋರ್ಟ್

Must read

ಮುಂಬೈ​: ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಅಕ್ಟೋಬರ್ 20ಕ್ಕೆ ಮುಂದೂಡಿದೆ. ಇದರಿಂದ ಇನ್ನೂ ಒಂದು ವಾರಗಳ ಕಾಲ ಆರ್ಯನ್​ ಜೈಲಿನಲ್ಲೇ ಇರಬೇಕಾಗಿದೆ.

ಇಂದು ಈ ಬಗ್ಗೆ ವಿಚಾರಣೆ ನಡೆಸಿದ ಮುಂಬೈ​ ಎನ್​ಡಿಪಿಎಸ್​ ನ್ಯಾಯಾಲಯ ಜಾಮೀನು ನೀಡಿದರೆ ಪ್ರಕರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾಗಿ, ಪ್ರಕರಣ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗುವುದು ಎಂದು ಹೇಳಿದೆ. ಇದರಿಂದ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಆರ್ಯನ್ ಖಾನ್​ಗೆ ಮತ್ತೆ ಹಿನ್ನೆಡೆಯಾಗಿದೆ. ನಾಳೆಯಿಂದ 19ರ ವರೆಗೆ ಮುಂಬೈ ಕೋರ್ಟ್​ಗಳಿಗೆ ರಜೆ ಇರುವುದರಿಂದ ಆರ್ಯನ್​ ಒಂದು ವಾರಗಳ ಮತ್ತೆ ಜೈಲಿನಲ್ಲೆ ಕಾಲ ಕಳೆಯಬೇಕಾಗಿದೆ.

ಮುಂಬೈ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ ವೇಳೆ ಮಾದಕ ವಸ್ತುವಿನೊಂದಿಗೆ ಸಿಕ್ಕಿಬಿದ್ದ ಹಿನ್ನೆಲೆ, ಆರ್ಯನ್ ಖಾನ್ ಸೇರಿದಂತೆ ಇತರರನ್ನು ಕಳೆದ ಅಕ್ಟೋಬರ್​ 2ರಂದು ಎನ್​ಸಿಬಿ ಬಂಧಿಸಿತ್ತು.

 

 

 

 

 

 

More articles

Latest article