ಗೂಡಚರ್ಯೆಗೆ ಐಫೋನ್​ ಬಳಸಿದ್ದ ಇಸ್ರೇಲಿ ಸಂಸ್ಥೆ: ಭದ್ರತಾಲೋಪ ಸರಿಪಡಿಸಿದ ಆಪಲ್​

ಗೂಡಚರ್ಯೆಗೆ ಐಫೋನ್​ ಬಳಸಿದ್ದ ಇಸ್ರೇಲಿ ಸಂಸ್ಥೆ: ಭದ್ರತಾಲೋಪ ಸರಿಪಡಿಸಿದ ಆಪಲ್​

ವಾಷಿಂಗ್ಟನ್: ಐಫೋನ್​ನಲ್ಲಿ ಪತ್ತೆಯಾಗಿದ್ದ ಭದ್ರತಾಲೋಪವನ್ನು ಸರಿಪಡಿಸಿರುವುದಾಗಿ ಆಪಲ್ ಸಂಸ್ಥೆ ತಿಳಿಸಿದೆ.

ಈ ಹಿಂದೆ ಸೌದಿ ಅರೇಬಿಯಾದ ಸಾಮಾಜಿಕ ಕಾರ್ಯಕರ್ತರು ಮತ್ತು ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರ ಐಫೋನ್​ಗಳನ್ನು ಹ್ಯಾಕ್ ಮಾಡಿರುವ ಸಂಗತಿ ಬೆಳಕಿಗೆ ಬಂದಿತ್ತು. ಇಸ್ರೇಲ್ ಮೂಲದ ಹ್ಯಾಕಿಂಗ್ ಸಂಸ್ಥೆ ಎನ್​ಎಸ್ಒ(NSO) ಈ ಕೃತ್ಯದ ಹಿಂದಿದೆ ಎನ್ನುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿದ್ದವು. ಸೌದಿ ಸರ್ಕಾರದ ಸೂಚನೆ ಮೇರೆಗೆ ಇಸ್ರೇಲ್ ಸಂಸ್ಥೆ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿತ್ತು.

ಜಗತ್ತಿನಲ್ಲೇ ಅತ್ಯಂತ ಸುರಕ್ಷಿತವಾದ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಐಫೋನ್ ಸಂಸ್ಥೆಗೆ ಘಟನೆಯಿಂದ ಮುಜುಗರ ಉಂಟಾಗಿತ್ತು. ಐಫೋನ್​ನಲ್ಲಿ ಇದ್ದ ಒಂದು ಲೋಪವನ್ನು ಇಸ್ರೇಲಿ ಸಂಸ್ಥೆ ಪತ್ತೆಹಚ್ಚಿತ್ತು. ಆ ಲೋಪದ ಸಹಾಯದಿಂದ ಸಂಸ್ಥೆ ಗೂಡಚರ್ಯೆ ತಂತ್ರಾಂಶವನ್ನು ಬಳಕೆದಾರರಿಗೆ ತಿಳಿಯದಂತೆಯೇ ಅವರ ಐಫೋನ್​ಗಳಲ್ಲಿ ಇನ್​ಸ್ಟಾಲ್ ಮಾಡಿತ್ತು.

ಆ ತಂತ್ರಾಂಶ ಬಳಕೆದಾರರ ಮೊಬೈಲ್​ನಲ್ಲಿ ದಾಖಲಾಗಿದ್ದ ಮಾಹಿತಿಯನ್ನು ಕದ್ದು ಗೌಪ್ಯವಾಗಿ ರವಾನೆ ಮಾಡುತ್ತಿತ್ತು. ಇದೀಗ ಆ ಲೋಪವನ್ನು ಸರಿಪಡಿಸಲಾಗಿದೆಯೆಂದು ಆಪಲ್ ಕಂಪನಿ ತಿಳಿಸಿದೆ.

ಪ್ರಸಾದ್​​ ಎಸ್​ ಹಿರೇಮಠ, ಟಿವಿ5

Related Stories

No stories found.
TV 5 Kannada
tv5kannada.com