Monday, November 29, 2021

ಅನನ್ಯಾ -ಆರ್ಯನ್ ನಡುವಿನ ವಾಟ್ಸಾಪ್ ಚಾಟ್ ಬಹಿರಂಗ, ಚಾಟ್ ತುಂಬಾ ಗಾಂಜಾ ಕೊಕೇನ್ನದ್ದೇ ಮಾತು!

Must read

ಡ್ರಗ್ಸ್ ಬಗ್ಗೆ ಆರ್ಯನ್ ಮತ್ತು ಅನನ್ಯಾ ಪಾಂಡೆ ನಡುವೆ ನಡೆದಿರುವ ಚಾಟ್ ನಶೆ ಪ್ರಪಂಚದ ಸೀಕ್ರೆಟ್ ಬಿಚ್ಚಿಡುತ್ತಿದೆ ಇವರಿಬ್ಬರ ವಾಟ್ಸಾಪ್ ಚಾಟ್ನಲ್ಲಿ ಆರ್ಯನ್ ಅನನ್ಯಾಗೆ ಗಾಂಜಾ ವ್ಯವಸ್ಥೆ ಮಾಡಲು ಕೇಳುತ್ತಾನೆ ಅದೇ ಸಮಯದಲ್ಲಿ, ಅನನ್ಯಾ ನಾನು ಗಾಂಜಾ ಆರ್ಡರ್ ಮಾಡುತ್ತೇನೆ ಎಂದು ಒಪ್ಪಿಕೊಳ್ಳುತ್ತಾಳೆ, ಆರ್ಯನ್ ಚಾಟ್‌ನಲ್ಲಿ ಎನ್‌ಸಿಬಿ ಬಗ್ಗೆಯೂ ಪ್ರಸ್ತಾಪಿಸಿದ್ದಾನೆ.

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಆಘಾತಕಾರಿ ಸಂಗತಿಗಳು ಬಹಿರಂಗವಾಗುತ್ತಿವೆ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ನಂತರ ಇದೀಗ ಅನನ್ಯಾ ಪಾಂಡೆ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ ಡ್ರಗ್ಸ್ ಬಗ್ಗೆ ಆರ್ಯನ್ ಮತ್ತು ಅನನ್ಯಾ ಪಾಂಡೆ ಹೊಸ ಚಾಟ್‌ಗಳು ಹೊರಬಿದ್ದಿವೆ.

ಆರ್ಯನ್ ಖಾನ್ ಮತ್ತು ಅನನ್ಯಾ ಪಾಂಡೆ ನಡುವಿನ ಆಘಾತಕಾರಿ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳಲ್ಲಿ, ಗ್ರೂಪ್ ಚಾಟ್‌ನ ಸ್ಕ್ರೀನ್‌ಶಾಟ್ ಕೂಡ ಇದೆ, ಇದರಲ್ಲಿ ಆರ್ಯನ್ “ಕೊಕೇನ್ ಟುಮಾರೋ” ಎಂದಿದ್ದು ಅದೇ ಸಮಯದಲ್ಲಿ ಚಾಟ್‌ನಲ್ಲಿ ಆರ್ಯನ್ ತನ್ನ ಸ್ನೇಹಿತರಿಗೆ ‘ಎನ್‌ಸಿಬಿ’ ಹೆಸರಿನಲ್ಲಿ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು ವಾಟ್ಸಾಪ್ ಚಾಟ್‌ನಲ್ಲಿ, ಆರ್ಯನ್ ಖಾನ್ ಅಚಿತ್ ಕುಮಾರ್ ಅವರೊಂದಿಗೆ ಡ್ರಗ್ಸ್ ಅನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆರ್ಯನ್ ಖಾನ್ ಅಚಿತ್ ಕುಮಾರ್ ಅವರಿಂದ 80,000 ರೂಪಾಯಿ ಮೌಲ್ಯದ ಡ್ರಗ್ಸ್ (weed) ಆರ್ಡರ್ ಮಾಡಿದರು … ಚಾಟ್‌ನಲ್ಲಿ
ಅನನ್ಯ-ಆರ್ಯನ್ ನಡುವಿನ ವಾಟ್ಸಾಪ್ ಚಾಟ್ನಲ್ಲಿ ಏನಿತ್ತು?

ಮೊದಲ ಚಾಟ್ ಸಂದೇಶವು ಜುಲೈ 2019 ರಿಂದ ಬಂದಿದೆ. ಈ ವಾಟ್ಸಾಪ್ ಚಾಟ್‌ಗಳಲ್ಲಿ ಅನನ್ಯ ಪಾಂಡೆ ಮತ್ತು ಆರ್ಯನ್ ಖಾನ್ ಡ್ರಗ್ಸ್ ಕುರಿತು ಚರ್ಚಿಸುತ್ತಿರುವುದು ಕಂಡುಬಂದಿದೆ.

ಆರ್ಯನ್ ಖಾನ್ – ನಾನು ನಿಮ್ಮನ್ನು ರಹಸ್ಯವಾಗಿ ಕರೆದುಕೊಂಡು ಹೋಗುತ್ತೇನೆ.

ಅನನ್ಯ ಪಾಂಡೆ – ಸರಿ

ಆರ್ಯನ್: weed

ಅನನ್ಯಾ: ಇದು ಬೇಡಿಕೆಯಲ್ಲಿದೆ

ಆರ್ಯನ್: ನಾನು ಅದನ್ನು ನಿಮ್ಮಿಂದ ರಹಸ್ಯವಾಗಿ ತೆಗೆದುಕೊಳ್ಳುತ್ತೇನೆ.

ಅನನ್ಯಾ: ಸರಿ

ಅದೇ ದಿನ ಆರ್ಯನ್ ಮತ್ತು ಅನನ್ಯಾ ಅವರ ಎರಡನೇ ಚಾಟ್

Also read:  ನೋಟ್ ಬ್ಯಾನ್​ನಿಂದಾದ ಅನಾಹುತಗಳನ್ನು ಮೊದಲು ಹೇಳಿದ್ದು ಮಮತಾ ಬ್ಯಾನರ್ಜಿ..!

ಅನನ್ಯ : ನಾನೀಗ ಈ ವ್ಯವಹಾರದಲ್ಲಿದ್ದೇನೆ

ಆರ್ಯನ್ : weed ತಂದಿದ್ದೀಯಾ?

ಆರ್ಯನ್: ಅನನ್ಯಾ

ಅನನ್ಯಾ: ಇನ್ನೇನು ಸಿಗುವುದರಲ್ಲಿದೆ

ಇಷ್ಟು ಸ್ಪಷ್ಟವಾಗಿ ಯಾವುದೇ ಕೋಡ್ ವರ್ಡ್ ಬಳಸದೇ ಇಬ್ಬರ ನಡುವೆ ಚಾಟ್ ನಡೆದಿದೆ , ಇವಿಷ್ಟೇ ಅಲ್ಲ ಆರ್ಯನ್ ಕೂಡ ತಾನೂ ಸ್ನೇಹಿತರಿಗಾಗಿ ಕೋಕೇನ್ ತರುತ್ತಿದ್ದೇನೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಇಂದು ಬಾಂಬೆ ಹೈಕೋರ್ಟ್ ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆರ್ಯನ್‌ಗೆ ಜಾಮೀನು ಸಿಗುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

Latest article