ಅಮೆರಿಕ ಭದ್ರತಾ ಪಡೆಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿ ವಾಯುದಾಳಿ ಕಾರ್ಯಾಚರಣೆ ನಡೆಸಿ, ಅಲ್ಖೈದಾ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿಯನ್ನು ಹತ್ಯೆ ಮಾಡಿವೆ.
ಈ ವಿಚಾರವನ್ನು ಸ್ವತಃ ಜೋ ಬೈಡೆನ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ನಾವು ನ್ಯಾಯ ಕೊಟ್ಟಿದ್ದೇವೆ. ಉಗ್ರಗಾಮಿಗಳ ನಾಯಕ ಇನ್ನಿಲ್ಲ. ನಮ್ಮ ಜನರಿಗೆ ಬೆದರಿಕೆ ಹಾಕುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಎಷ್ಟೇ ಸಮಯವಾದರೂ, ಎಲ್ಲಿಯೇ ಇದ್ದರೂ, ಎಲ್ಲಿ ಅಡಗಿ ಕುಳಿತಿದ್ದರೂ ಅಂಥವರನ್ನು ಅಮೆರಿಕ ಕೊಲ್ಲುತ್ತದೆ ಎಂದು ಬೈಡೆನ್ ಟಿವಿಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
I’m addressing the nation on a successful counterterrorism operation. https://t.co/SgTVaszA3s
— President Biden (@POTUS) August 1, 2022
ಕರ್ನಾಟಕದಲ್ಲಿ ಹಿಜಾಬ್ ವಿವಾದ ಗರಿಗೆದರಿದ್ದಾಗ ಅಲ್ಖೈದಾ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಅಲ್-ಜವಾಹಿರಿ ವಿಡಿಯೋ ಸಂದೇಶ ಹರಿಬಿಟ್ಟು ಪ್ರತಿಭಟನೆಗಳನ್ನು ಬೆಂಬಲಿಸಿ, ಹೋರಾಟಕ್ಕೆ ಕರೆ ನೀಡಿದ್ದ.