ತಾನು ಕಿಡ್ನ್ಯಾಪ್ ಆಗಿದ್ದಿನೆಂದು ತಂದೆಗೆ ಮೆಸೇಜ್ ಮಾಡಿ ಸಿಕ್ಕಿಬಿದ್ದ ಮಗನ ಕಥೆ ಇದು. ಈ ಘಟನೆ ನಡೆದಿದ್ದು ಚೆನ್ನೈನಲ್ಲಿ.
ಶಾರ್ಟ್ ಮೂವಿ ಮಾಡುವ ಆಸೆ ಇಟ್ಟುಕೊಂಡು ಕಿಡ್ನ್ಯಾಪ್ ಕಥೆ ಕಟ್ಟಿ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ. ಕಿಡ್ನ್ಯಾಪ್ ಎಂದ ಕೂಡ ಗಾಬರಿಯಾದ ತಂದೆ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.
ಕೃಷ್ಣಪ್ರಸಾದ್ ಎಂಬ 24 ವರ್ಷದ ಯುವಕ ನಡೆಸಿದ ಕೃತ್ಯ ಇದು. ಈತನ ತಂದೆ ಪೆನ್ಸಿಲಾಯ ಚೆನ್ನೈನ ದೊಡ್ಡ ಉದ್ಯಮಿಯಾಗಿದ್ದಾರೆ. ಇವರ ಮಗ ಕೃಷ್ಣಪ್ರಸಾದ್ಗೆ ಶಾರ್ಟ್ ಮೂವಿ ಮಾಡಬೇಕೆಂಬ ಹುಚ್ಚು ಆದ್ರೆ ತಂದೆ ಇದಕ್ಕೆ ಸಹಕಾರ ನೀಡುತ್ತಿರಲಿಲ್ಲ. ಹೀಗಾಗಿ ತನ್ನ ಮೊಬೈಲ್ ನಿಂದಲೇ ತಂದೆ ಮೆಸೆಜ್ ಹಾಕಿ ತನ್ನನ್ನ ಕಿಡ್ನ್ಯಾಪ್ ಮಾಡಿದ್ದಾರೆ. 30 ಲಕ್ಷ ಕೊಟ್ಟರೆ ಬಿಡ್ತಾರೆ ಇಲ್ಲಾಂದ್ರೆ ಕೊಲ್ಲುವುದಾಗಿ ಹೇಳ್ತಿದ್ದಾರೆಂದು ತಂದೆಗೆ ಬೆದರಿಸಿದ್ದ . ಸಹಜವಾಗಿಯೇ ಆತಂಕಗೊಂಡ ಪೆನ್ಸಿಲಾಯ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
ತಕ್ಷಣ ಅಲರ್ಟ್ ಆದ ಪೊಲೀಸರು ಮಗನ ಮೊಬೈಲ್ ನೆಟ್ವರ್ಕ್ ಆಧರಿಸಿ ಸಿಕಂದರಾಬಾದ್ನಲ್ಲಿ ಮಗ ಸಿಕ್ಕಿಬಿದ್ದಿದ್ದ. ವಿಚಾರಣೆ ನಡೆಸಿದಾಗ ಇಡೀ ಡ್ರಾಮಾ ಬೆಳಕಿಗೆ ಬಂದಿದೆ. ತಂದೆಯ ಮನವಿ ಮೇರೆಗೆ ಯಾವುದೇ ಕೇಸು ದಾಖಲಿಸ ಪೊಲೀಸರು ಮಗನಿಗೆ ವಾರ್ನಿಂಗ್ ಕೊಟ್ಟು ಕಳಿಸಲಾಗಿದೆ.