Tuesday, May 17, 2022

ಕ್ಯಾಥೋಲಿಕ್ ಚರ್ಚ್​ನಲ್ಲಿ ಲಕ್ಷ..ಲಕ್ಷ.. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ..!

Must read

ಫ್ರಾನ್ಸ್‌ನ ಪ್ರಸಿದ್ಧ ಕ್ಯಾಥೋಲಿಕ್ ಚರ್ಚ್‌ನ ಆವರಣದಲ್ಲಿ ಕಳೆದ 70 ವರ್ಷಗಳಲ್ಲಿ 3.30 ಲಕ್ಷ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆಘಾತಕಾರಿ ಅಂಶವೊಂದು ಬಹಿರಂಗವಾಗಿದೆ. ಚರ್ಚ್‌ನ ಆವರಣದಲ್ಲಿ1950ರಿಂದ 2021ರವರೆಗೆ 3,30,000 ಅಪ್ರಾಪ್ತ ವಯಸ್ಸಿನವರ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎಂದು ಸ್ವತಂತ್ರ ಆಯೋಗವೊಂದರ ಸಮೀಕ್ಷಾ ವರದಿ ತಿಳಿಸಿದೆ.

ಈ ಚರ್ಚ್​ಗಳಲ್ಲಿ ಲೈಂಗಿಕ ದೌರ್ಜನ್ಯ ಕೇವಲ ಹೆಣ್ಣುಮಕ್ಕಳ ಮೇಲೆಯಲ್ಲ, ಬದಲಿಗೆ 10-13 ವರ್ಷದೊಳಗಿನ ಗಂಡು ಮಕ್ಕಳ ಮೇಲೂ ಕಾಮುಕರ ಕೆಟ್ಟ ದೃಷ್ಟಿ ವಕ್ಕರಿಸಿದೆ. ರೋಮನ್ ಕ್ಯಾಥೋಲಿಕ್ ಚರ್ಚ್​ನ ಈ ಲೈಂಗಿಕ ಹಗರಣಗಳು ಜಗತ್ತಿನಾದ್ಯಂತ ನಡೆಯುತ್ತಿದ್ದು, ಇದರಲ್ಲಿ ಮಕ್ಕಳ ಲೈಂಗಿಕ ಶೋಷಣೆ ಹೆಚ್ಚಾಗಿದೆ. ಕಳೆದ 20 ವರ್ಷಗಳಲ್ಲಿ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಹೆಚ್ಚಾಗಿ ವರದಿ ಆಗುತ್ತಿದ್ದು, 1950ರಿಂದ ಈ ವರಗೆ ಲೈಂಗಿಕ ದೌರ್ಜನ್ಯದಲ್ಲಿ ಭಾಗಿಯಾಗಿರುವ ಪಾದ್ರಿಗಳು ಮತ್ತು ಚರ್ಚ್ ಅಧಿಕಾರಿಗಳ ಸಂಖ್ಯೆ 3000 ಎನ್ನಲಾಗಿದೆ

ಕ್ಯಾಥೋಲಿಕ್‌ ಚರ್ಚ್​ಗಳಲ್ಲಿ ನಡೆದಿರುವ ಈ ದೌರ್ಜನ್ಯಗಳಲ್ಲಿ ಪಾದ್ರಿಗಳು, ಧರ್ಮಗುರುಗಳು ಹಾಗೂ ಧಾರ್ಮಿಕೇತರ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದಿರುವ ಈ ವರದಿ, ತೊಂದರೆಗೆ ಒಳಗಾದವರಲ್ಲಿ ಶೇ.80 ಪುರುಷರು ಎಂಬುದಾಗಿ ಹೇಳಿದೆ. ಆಯೋಗದ ಅಧ್ಯಕ ಜೀನ್‌ ಮಾರ್ಕ್ ಸಾವೆ, ಚರ್ಚ್ ಲೈಂಗಿಕ ದೌರ್ಜನ್ಯ ಕುರಿತು ಸಿದ್ಧಪಡಿಸಿದ 2500 ಪುಟಗಳ ವರದಿಯನ್ನು ಬಿಡುಗಡೆ ಮಾಡಿದ್ದು, ವೈಜ್ಞಾನಿಕ ಅಂಕಿ ಅಂಶಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ತುಂಬ ಹಿಂದಿನಿಂದಲೂ ಫ್ರಾನ್ಸ್‌ನ ಕ್ಯಾಥೋಲಿಕ್‌ ಚರ್ಚ್​ಗಳಲ್ಲಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿದ್ದವು. ಈ ಬಗ್ಗೆ ತನಿಖೆ ನಡೆಸಲು ಅಲ್ಲಿನ ಪ್ರಭಾವಿ ಪಾದ್ರಿಗಳು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದರು. ಅಂತಿಮವಾಗಿ ಫ್ರಾನ್ಸ್‌ ಸರಕಾರ ಆಯೋಗ ರಚಿಸಿ ತನಿಖೆಗೆ ಆದೇಶ ನೀಡಿದಾಗ ದೌರ್ಜನ್ಯದ ಅಪರಾವತಾರ ತೆರೆದುಕೊಂಡಿದೆ ಎನ್ನಲಾಗಿದೆ.

Latest article