Tuesday, October 26, 2021

ಮಗಳ ಮೇಲೆ ಅತ್ಯಾಚಾರ, ಬೇರೆಯವರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯ; 28 ಮಂದಿ ಅರೆಸ್ಟ್…!

Must read

ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ 11 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 28 ಜನರನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ತಂದೆ, ಸಮಾಜವಾದಿ ಪಕ್ಷದ ಜಿಲ್ಲಾ ಅಧ್ಯಕ್ಷ ಮತ್ತು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರು ಸೇರಿದಂತೆ 28 ಆರೋಪಿಗಳು ಸೇರಿದ್ದಾರೆ.
ಆಕೆ 6 ನೇ ತರಗತಿಯಲ್ಲಿ ಓದುತ್ತಿದ್ದಾಗ ಆಕೆಯ ತಂದೆ ಮೊದಲ ಬಾರಿಗೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾಳೆ, ಅಂದಿನಿಂದ ಆಕೆಯ ತಂದೆ ತನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ತಂದೆ ಬೇರೆ ವ್ಯಕ್ತಿಗಳನ್ನ ವ್ಯಾಪಾರದ ಉದ್ದೇಶಕ್ಕಾಗಿ ಮನೆಗೆ ಕರೆದುಕೊಂಡು ಬರುತ್ತಿದ್ದ . ಅವರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಲು ಒತ್ತಾಯಿಸುತ್ತಿದ್ದ ಎಂದು ಹೇಳಿದ್ದಾಳೆ.
ತನ್ನ ದೂರಿನಲ್ಲಿ, ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ತಿಲಕ್ ಯಾದವ್, ಅವರ ಮೂವರು ಕಿರಿಯ ಸಹೋದರರು, ಬಿಎಸ್ಪಿ ಜಿಲ್ಲಾ ಅಧ್ಯಕ್ಷ ದೀಪಕ್ ಅಹಿರ್ವಾರ್, ಬಿಎಸ್ಪಿ ಉಪಾಧ್ಯಕ್ಷ ನೀರಜ್ ತಿವಾರಿ ಮತ್ತು ಆಕೆಯ ಕುಟುಂಬದ ಕೆಲ ಸದಸ್ಯರು ಸೇರಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದಾಳೆ.
ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ತನ್ನ ತಾಯಿಯನ್ನು ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಪೊಲೀಸರು ಆಕೆಯ ತಂದೆ ಸೇರಿದಂತೆ 28 ಆರೋಪಿಗಳ ವಿರುದ್ಧ ಸೆಕ್ಷನ್ 354, 376D, 323, 328, 506, 120 ಬಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ನಿನ್ನೆ ತಡರಾತ್ರಿ 28 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹುಡುಗಿ ಅಪ್ರಾಪ್ತ ವಯಸ್ಕಳು ಮತ್ತು ಆಕೆಗೆ ಒಬ್ಬ ಸಹೋದರ ಕೂಡ ಇದ್ದಾನೆ. ಎಲ್ಲಾ ಹೇಳಿಕೆಗಳು ಮತ್ತು ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಲಲಿತಪುರ ಎಎಸ್ಪಿ ಗಿರಿಜೇಶ್ ಕುಮಾರ್ ಹೇಳಿದರು.ಹುಡುಗಿಯ ಹೇಳಿಕೆಯನ್ನು ದಾಖಲಿಸಲಾಗಿದೆ ಮತ್ತು ಆಕೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗತ್ತೆ ಎಂದಿದ್ದಾರೆ. ಎಲ್ಲಾ ಕೋನಗಳಿಂದಲೂ ತನಿಖೆ ಮಾಡಲಾಗುತ್ತದೆ ಏಕೆಂದರೆ ವಿಷಯವು ಬಹಳ ಸೂಕ್ಷ್ಮವಾಗಿದೆ. ಹೊಸ ಸಾಕ್ಷ್ಯಗಳು ಕಲೆಹಾಕುತ್ತಿದ್ದೇವೆ ಎಂದು ಎಎಸ್ಪಿ ಗಿರಿಜೇಶ್ ಕುಮಾರ್ ಹೇಳಿದ್ದಾರೆ.

Also read:  ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾರನ್ನು ತೆಗೆದು ಹಾಕಿ ಎಂದು ರೈತರ ಪ್ರತಿಭಟನೆ:

More articles

Latest article