Monday, November 29, 2021

ಜಮ್ಮು-ಕಾಶ್ಮೀರದೊಳಗೆ ನುಸುಳಲು 250 ಉಗ್ರರು ಕಾಯುತ್ತಿರುವುದಾಗಿ ಗುಪ್ತಚರ ಇಲಾಖೆಗೆ ಮಾಹಿತಿ..!

Must read

ಈ ವರ್ಷಾಂತ್ಯದೊಳಗೆ ದೇಶದ ಒಳಗೇ ನುಸುಳಲು ಎಲ್ಒಸಿಯಲ್ಲಿ 250 ಉಗ್ರರು ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ. ದೇಶದೊಳಗೆ ನುಸುಳಲು ಹೊಂಚು ಹಾಕುತ್ತಿರುವ ಉಗ್ರರು ಬಹುತೇಕ ಲಷ್ಕರ್-ಇ- ತೊಯ್ಬಾ ಮತ್ತು ಜೈಷ-ಇ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಕೇಂದ್ರ ಗುಪ್ತಚರ ಗೆ ಮಾಹಿತಿ ಸಿಕ್ಕಿದೆ. ಉಗ್ರ ಸಂಘಟನೆಗಳು ಈ ಬಾರಿ ಹೊಸ ಮಾರ್ಗಗಳನ್ನು ಹುಡುಕಿದ್ದಾರೆ ನದಿಯ ಅಂತರಗಳು ಮತ್ತು ಪತ್ತೆಯಾಗದ ಸುರಂಗಗಳನ್ನು ಇಂಟೆಲ್ ವರದಿಗಳು ಸೂಚಿಸುತ್ತವೆ ಎಂದು ಉನ್ನತ ಗುಪ್ತಚರ ಅಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಸಾಕಷ್ಟು ಭದ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿದ್ದೇವೆ ಆದರೆ ಅಫ್ಗಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಿರುವುದರಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ನೈತಿಕತೆ ಹೆಚ್ಚಿದೆ ಮತ್ತು ಅವರ ಭಯೋತ್ಪಾದಕರಿಗೆ ತರಬೇತಿಯನ್ನು ತೀವ್ರಗೊಳಿಸಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಾವು ಜಾಗರೂಕರಾಗಿದ್ದೇವೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧ ಎಂದು ಭದ್ರತಾ ಅಧಿಕಾರಿ ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಪಾಕಿಸ್ತಾನ- ಭಾರತ ನಡುವಣ ಕದನ ವಿರಾಮ ಒಪ್ಪಂದ ಆಗಿದ್ದರೂ ಎಲ್ಒಸಿಯಾದ್ಯಂತ ಅಪಾರ ಸಂಖ್ಯೆಯ ಉಗ್ರರು ಬರುತ್ತಿರುವುದಾಗಿ ಹಿರಿಯ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ತಂಗ್ಧರ್,ಭಿಂಬರ್ ಗಲಿ ಮತ್ತು ನೌಶೇರಾ ಸೆಕ್ಟರ್ ನಲ್ಲಿ ಉಗ್ರರ ಸಂಖ್ಯೆ ಯಲ್ಲಿ ಹೆಚ್ಚಳವಾಗುತ್ತಿದೆ.

Latest article