Friday, January 21, 2022

ಗಾಳಿಯಲ್ಲಿ 20 ನಿಮಿಷವಿದ್ದರೆ ಸಾಕು ಕೊರೊನಾ ವೈರಸ್ ತೀವ್ರತೆ 90% ಕಡಿಮೆ..!

Must read

ಸದ್ಯ ಇಡೀ ವಿಶ್ವವನ್ನೇ ಕೊರೊನಾ ಹೆಮ್ಮಾರಿ ಎಲ್ಲಿಲ್ಲದಂತೆ ಕಾಡುತ್ತಿದೆ. ವೈರಾಣುವು ಗಾಳಿಯಲ್ಲಿ 20 ನಿಮಿಷಗಳಿದ್ದರೆ ಸಾಕು, ತನ್ನ 90% ಸಾಮರ್ಥ್ಯ‌ ಕಳೆದುಕೊಳ್ಳುತ್ತದೆ ಎಂಬ ವರದಿಯೊಂದು ಸದ್ಯ ಹೊರಬಿದ್ದಿದೆ.

ಶೀನು, ಕೆಮ್ಮು, ಉಗುಳಿನಿಂದ ಗಾಳಿಗೆ ಹಾರಿದ ವೈರಾಣು 5 ನಿಮಿಷಗಳ ಒಳಗಾಗಿ ವ್ಯಕ್ತಿಯೊಬ್ಬರ ದೇಹ ಹೊಕ್ಕಬೇಕು. ಇಲ್ಲವಾದಲ್ಲಿ ಸೋಂಕು ತೀವ್ರವಾಗಿಸುವ ಸಾಮರ್ಥ್ಯ‌ ಕುಂಠಿತವಾಗುತ್ತದೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಬ್ರಿಟನ್ನಿನ ಬ್ರಿಸ್ಟಲ್‌ ವಿಶ್ವವಿದ್ಯಾಲಯದ ಏರೊಸಾಲ್‌ ಸಂಶೋಧನಾ ಕೇಂದ್ರದಲ್ಲಿ ನಡೆದ ಮಹತ್ವದ ಸಂಶೋಧನೆಯ ವರದಿಯಲ್ಲಿ ಕೊರೊನಾ ವೈರಾಣುವಿನ ವರ್ತನೆಗಳ ಕುರಿತಾದ ವಿವರಗಳು ಬಹಿರಂಗಗೊಂಡಿದೆ.

ಶ್ವಾಸಕೋಶದಲ್ಲಿ ನೀರಿನಾಂಶದ ವಾತಾವರಣದಲ್ಲಿ ಜೀವಿಸುವ ವೈರಾಣು, ವ್ಯಕ್ತಿಯ ದೇಹದಿಂದ ಹೊರಕ್ಕೆ ಬಿದ್ದ ಕೂಡಲೇ ಇಂಗಾಲದ ಡೈ ಆಕ್ಸೈಡ್‌ನ ಪ್ರಭಾವದಿಂದ ತನ್ನ ಸಾಮರ್ಥ್ಯ‌ ಕಳೆದುಕೊಳ್ಳುತ್ತಾ ಹೋಗುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಿದಷ್ಟೂ ವೈರಾಣು ಸಾಮರ್ಥ್ಯ‌ ಕುಗ್ಗುವುದು ವೇಗವಾಗಲಿದೆ. 90% ನೀರಿನಂಶ ಇರುವ ವಾತಾವರಣದಲ್ಲಿ 5 ನಿಮಿಷಗಳಲ್ಲಿ ಕೊರೊನಾ ವೈರಾಣುವು ಶೇ.52ರಷ್ಟು ಸೋಂಕು ಉಂಟು ಮಾಡುವ ಸಾಮರ್ಥ್ಯ‌ ಕಳೆದುಕೊಳ್ಳುತ್ತದೆ.

Latest article