ಅಮೆರಿಕಾದಲ್ಲಿ ಇಬ್ಬರು ಪಾಕ್ ಪ್ರಜೆಗಳು ಬಂಧನ

ಅಮೆರಿಕಾದಲ್ಲಿ ಇಬ್ಬರು ಪಾಕ್ ಪ್ರಜೆಗಳು ಬಂಧನ

ನ್ಯೂಯಾರ್ಕ್: ಅಮೆರಿಕಕ್ಕೆ ಅಕ್ರಮವಾಗಿ ನುಸುಳಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಗಡಿ ಗಸ್ತು ಸಂಸ್ಥೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಅಮೆರಿಕ-ಕೆನಡಾ ಗಡಿ ಬಳಿಯ ರಸ್ತೆಯಲ್ಲಿ ಅನುಮಾನಸ್ಪದವಾಗಿ ನಡೆದು ಹೋಗುತ್ತಿದ್ದ ಇಬ್ಬರನ್ನು ತಡೆದು ವಿಚಾರಿಸಿದಾಗ ಅವರು ಪಾಕ್ ಪ್ರಜೆಗಳು ಎಂದು ತಿಳಿದಿದೆ. ನಮ್ಮ ದೇಶದಲ್ಲಿ ಉಳಿಯುವ ಯಾವುದೇ ದಾಖಲೆ ಪತ್ರಗಳು ಅವರ ಬಳಿ ಇರಲಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತನಲ್ಲಿ ಒಬ್ಬ ಅಪ್ತಾಬ್ ಅಕ್ಬರ್ ಹುಸೇನ್(41) ಎಂದು ತಿಳಿಸಲಾಗಿದ್ದು, ಈತನನ್ನು ಕಳೆದ 2013ರಲ್ಲಿ ಅನಕೃತ ವರ್ತನೆ ಹಿನ್ನೆಲೆಯಲ್ಲಿ ದೇಶದಿಂದ ಬಹಿಷ್ಕರಿಸಿ ಎರಡು ವರ್ಷ ಜೈಲಿಗೆ ಕಳುಹಿಸಲಾಗಿತ್ತು. ಈಗ ಆತನನ್ನು ನ್ಯೂಯಾರ್ಕ್ ಉತ್ತರ ಜಿಲ್ಲೆಯ ಅಮೆರಿಕ ಅಟಾರ್ನಿ ಕಚೇರಿಯಲ್ಲಿ ಬಂಧಿಸಿಡಲಾಗಿದೆ ಎಂದು ಹೇಳಲಾಗಿದೆ. 33 ವರ್ಷದ ಮತ್ತೊಬ್ಬ ಕೆನಡಾದಿಂದ ಅಮೆರಿಕ ಗಡಿ ದಾಟಿ ಬಂದಿದ್ದು. ಅವನನ್ನೂ ಕೂಡ ಹೊರಗಟ್ಟಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಾದ್​ ಎಸ್​​ ಹಿರೇಮಠ, ಟಿವಿ5​

Related Stories

No stories found.
TV 5 Kannada
tv5kannada.com