Sunday, October 2, 2022

ಅಯೋಧ್ಯೆಯ ಶ್ರೀರಾಮ ದೇವಸ್ಥಾನಕ್ಕೆ 1800 ಕೋಟಿ ಬೇಕಾಗುತ್ತದೆ ಎಂದ ಟ್ರಸ್ಟ್

Must read

ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಸಭೆಯನ್ನು ಭಾನುವಾರ ಕರೆಯಲಾಗಿದ್ದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಸುಮಾರು 1,800 ಕೋಟಿ ರೂ. ಬೇಕಾಗಬಹುದು ಇದು ಪರಿಷ್ಕೃತ ಅಂದಾಜು ಎಂದ ತಿಳಿಸಿದ್ದಾರೆ.

ಹಲವಾರು ಪರಿಷ್ಕರಣೆಗಳ ನಂತರ, ನಾವು ಈ ಅಂದಾಜು ಮೌಲ್ಯವನ್ನು ಗಣನೆಗೆ ತೆಗೆದುಕೊಂಡಿದ್ದೇವೆ ಇದು ಸ್ವಲ್ಪ ಹೆಚ್ಚಾಗಬಹುದು” ಎಂದು ರೈ ನಿರ್ಮಾಣ ವೆಚ್ಚದ ಬಗ್ಗೆ ಹೇಳಿದ್ದಾರೆ. ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ನೇತೃತ್ವದಲ್ಲಿ ಸಭೆ ನಡೆದಿದ್ದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೂಡ ಸಭೆಯಲ್ಲಿ ತನ್ನ ನಿಯಮಗಳು ಮತ್ತು ನಿಬಂಧನೆಗಳನ್ನು ಅಂತಿಮಗೊಳಿಸಿದೆ.

“ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಯಮಗಳು ಮತ್ತು ನಿಬಂಧನೆಗಳನ್ನು ಅಂತಿಮಗೊಳಿಸಲಾಗಿದೆ. ನಾವು ಕಳೆದ ಹಲವಾರು ತಿಂಗಳುಗಳಿಂದ ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ” ಎಂದು ಚಂಪತ್ ರೈ ಹೇಳಿದ್ದಾರೆ. 15 ಟ್ರಸ್ಟ್‌ನ 14 ಸದಸ್ಯರಲ್ಲಿ 14 ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ರಾಮಾಯಣ ಕಾಲದ ಹಲವಾರು ಇತರ ದೇವತೆಗಳ ವಿಗ್ರಹಗಳನ್ನು ಸಹ ರಾಮಮಂದಿರದಲ್ಲಿ ಇರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಮಂದಿರದ ನಿರ್ಮಾಣವು ಡಿಸೆಂಬರ್ 2023 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ರೈ ಹೇಳಿದ್ದು ಮಕರ ಸಂಕ್ರಾಂತಿಯಂದು ಭಗವಾನ್ ರಾಮನು ಗರ್ಭಗುಡಿಯಲ್ಲಿ ಸ್ಥಾಪಿಸಲ್ಪಡುವ ನಿರೀಕ್ಷೆಯಿದೆ ಎಂದಿದ್ದಾರೆ.

 

Latest article