Thursday, January 27, 2022

ಕಾಲು ನೋವಿಗೆ 12 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡ 84 ರ ವೃದ್ದ, ನಂತರ ಆಗಿದ್ದೇನು ಗೊತ್ತಾ?

Must read

ಬಿಹಾರದ ಮಾಧೇಪುರ ಜಿಲ್ಲೆಯ ಪುರಾಣಿ ಬ್ಲಾಕ್ ವ್ಯಾಪ್ತಿಯ ಔರೈ ಗ್ರಾಮದ ಬ್ರಹ್ಮದೇವ್ ಮಂಡಲ್ (84) ಕಳೆದ 10 ತಿಂಗಳಲ್ಲಿ ವಿವಿಧ ಸ್ಥಳಗಳಲ್ಲಿ 11 ಬಾರಿ ಕೊರೊನಾ ಲಸಿಕೆ ಯನ್ನು ತೆಗೆದುಕೊಂಡಿದ್ದಾರೆ. ಹೌದು ಲಸಿಕೆ ತೆಗೆದುಕೊಂಡ ನಂತರ ಅವರ ಮೊಣಕಾಲು ನೋವು ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಅದಕ್ಕಾಗಿಯೇ ಅವರು 11 ಬಾರಿ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಈ ಹಿಂದೆ ಇವರು ಗ್ರಾಮೀಣ ಭಾಗದಲ್ಲಿ ವೈಧ್ಯರಾಗಿ ಕೆಲಸ ಮಾಡುತ್ತಿದ್ದರು..
ಅವರು ಭಾನುವಾರ 12 ನೇ ಡೋಸ್ ತೆಗೆದುಕೊಳ್ಳಲು ಚೌಸಾ ಕೇಂದ್ರಕ್ಕೆ ಹೋದಾಗ ಜನರು ಅವರನ್ನು ಗುರುತಿಸಿದರು. ಅವರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಬದಲಾಯಿಸಿ ಲಸಿಕೆ ಪಡೆಯುತ್ತಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪುರೈನಿ ವೈದ್ಯಕೀಯ ಅಧಿಕಾರಿ ಡಾ. ವಿನಯ ಕುಮಾರ್ ಹೇಳಿದರು. ಸಿವಿಲ್ ಸರ್ಜನ್ ಗಳು ಪರೀಕ್ಷೆಗಾಗಿ ಪುರಾಣಿಗೆ ತೆರಳಿದ್ದಾರೆ. ಬ್ರಹ್ಮದೇವ್ ಮಂಡಲ್ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದರು. ಐಡಿ ಯನ್ನು ಬದಲಾಯಿಸುವುದು ಮತ್ತು ಲಸಿಕೆಯನ್ನು ಪದೇ ಪದೇ ತೆಗೆದುಕೊಳ್ಳುವುದು ನಿಯಮಕ್ಕೆ ವಿರುದ್ಧವಾಗಿದೆ ಎಂದು ಸಿವಿಲ್ ಸರ್ಜನ್ ಡಾ. ಅಮರೇಂದ್ರ ನಾರಾಯಣ್ ಶಾಹಿ ಹೇಳಿದರು. ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದೂ ಹೇಳಿದ್ದಾರೆ..

 

Latest article