Monday, November 29, 2021

ರಾತ್ರೋ ರಾತ್ರಿ ಕಾಂಗ್ರೆಸ್ ನ 18 ಜನ ಎಂ.ಎಲ್.ಎ ಗಳಲ್ಲಿ 11 ಜನ ತೃಣಮೂಲ ಕಾಂಗ್ರೆಸ್ ಗೆ ಜಂಪ್: ಇದೆಂತ ಸ್ಥಿತಿ ಬಂತು ಕಾಂಗ್ರೆಸ್ ಗೆ!

Must read

ಕೋಲ್ಕತ್ತಾ: ಮೇಘಾಲಯದ ಮಾಜಿ ಸಿಎಂ ಮುಕುಲ್ ಸಂಗ್ಮಾ ಮತ್ತು ಇತರ 11 ಕಾಂಗ್ರೆಸ್ ಶಾಸಕರು ತೃಣಮೂಲ ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಬುಧವಾರ ತಡರಾತ್ರಿ ಹೇಳಿಕೊಂಡಿದ್ದು, ಈಶಾನ್ಯ ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷವು ಪ್ರಮುಖ ಪ್ರತಿಪಕ್ಷವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 18 ಶಾಸಕರನ್ನು ಹೊಂದಿದ್ದು, ಐದು ಬಾರಿ ಶಾಸಕರಾಗಿರುವ ಸಂಗ್ಮಾ ಪ್ರಸ್ತುತ ಅಲ್ಲಿನ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಶಿಲ್ಲಾಂಗ್ ಸಂಸದ ವಿನ್ಸೆಂಟ್ ಎಚ್ ಪಾಲರನ್ನು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದಾಗಿನಿಂದ ಸಂಗ್ಮಾ ಮುನಿಸು ಹೆಚ್ಚಾಗಿತ್ತು. ಟಿಎಂಸಿಯ ಪ್ರಶಾಂತ್ ಕಿಶೋರ್, ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಟಿಎಂಸಿ ರಾಜ್ಯಸಭಾ ಸದಸ್ಯೆ ಸುಶ್ಮಿತಾ ದೇವ್ ಅವರೊಂದಿಗಿನ ಅವರ ಮಾತು ಕಥೆಗಳು ಈಗ ಕಡೆಗೂ ಫಲ ಕೊಟ್ಟಿದ್ದು ತೃಣಮೂಲ ಕಾಂಗ್ರೆಸ್ ಸೇರುವುದು ದೃಢವಾಗಿದೆ.
ಕಾಂಗ್ರೆಸ್ ತನ್ನ ಪಕ್ಷದ ನಾಯಕರು ಟಿಎಂಸಿಗೆ ಹೋಗುತ್ತಿರುವುದು ನಮಗೆ ಗೊತ್ತಿದ್ದೂ ಇದು ಪಕ್ಷವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮಾತನಾಡಿ, ಕಾಂಗ್ರೆಸ್ ಅನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಈ ಹಿಂದೆಯೂ ಮಾಡಲಾಗಿತ್ತು ಆದರೆ ಅದು ಯಶಸ್ವಿಯಾಗಲಿಲ್ಲ. ಮಂಗಳವಾರ ಟಿಎಂಸಿಗೆ ಸೇರ್ಪಡೆಯಾದ ಕೆಲವರಲ್ಲಿ ಮಾಜಿ ಸಂಸದ ಕೀರ್ತಿ ಆಜಾದ್ ಮತ್ತು ಹರಿಯಾಣ ನಾಯಕ ಅಶೋಕ್ ತನ್ವಾರ್ ಕೂಡ ಸೇರಿದ್ದಾರೆ.

Latest article