Tuesday, August 16, 2022

ರಾಜ್‌ಪಥ್‌ ಮೊದಲ ಪರೇಡ್​ನ ಮುಖ್ಯ ಅತಿಥಿ ಯಾರು..? ಗಣರಾಜ್ಯೋತ್ಸವದ ಬಗ್ಗೆ ತಿಳಿದಿರಲೇಬೇಕಾದ ವಿಚಾರಗಳು..!

Must read

ಇಂದು ದೇಶದಾದ್ಯಂತ 73ನೇ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಭಾರತೀಯರಾದ ನಾವು ಈ ಹತ್ತು ವಿಚಾರಗಳನ್ನು ತಿಳಿಯಲೇಬೇಕು. ಗಣರಾಜ್ಯೋತ್ಸವ ಎಂದರೇನು..? ವೈವಿಧ್ಯತೆಯಲ್ಲಿ ಏಕತೆ ಕಂಡ ರಾಷ್ಟ್ರ ಭಾರತದಲ್ಲಿ ಯಾಕೆ ಜನವರಿ 26ರಂದೇ ಗಣರಾಜ್ಯೋತ್ಸವ ಆಚರರಿಸಲಾಗುತ್ತದೆ..? ಗಣರಾಜ್ಯೋತ್ಸವ ಆಚರಣೆಯ ಹಿನ್ನೆಲೆ ಏನು..? ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

1- ಭಾರತದಲ್ಲಿನ ವಸಾಹತುಶಾಹಿ ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1930ರಲ್ಲಿ ಆಚರಿಸಿದ “ಪೂರ್ಣ ಸ್ವರಾಜ್ ದಿವಸ್” (ಭಾರತೀಯ ಸ್ವಾತಂತ್ರ್ಯ ದಿನಾಚರಣೆಯ ಘೋಷಣೆ) ಪ್ರಾಮುಖ್ಯತೆಯನ್ನು ಗುರುತಿಸಲು ಜನವರಿ 26ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.


2. ಭಾರತದ ಸಂವಿಧಾನವು 26 ಜನವರಿ 1950 ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. 308 ಸದಸ್ಯರ ಸಂವಿಧಾನ ಸಭೆಯು, ದೇಶಕ್ಕೆ ಐತಿಹಾಸಿಕ ಮತ್ತು ಪ್ರಮುಖ ದಾಖಲೆಯನ್ನು ರಚಿಸಲು ಎರಡು ವರ್ಷಗಳು, 11 ತಿಂಗಳುಗಳು ಮತ್ತು 17 ದಿನಗಳನ್ನು ತೆಗೆದುಕೊಂಡಿತು. ಇದು ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ.


3. ಭಾರತೀಯ ಸಂವಿಧಾನವು ಎರಡು ಕೈಬರಹದ ಪ್ರತಿಗಳನ್ನು ಹೊಂದಿದೆ, ಒಂದು ಹಿಂದಿಯಲ್ಲಿ ಮತ್ತು ಇನ್ನೊಂದು ಇಂಗ್ಲಿಷ್‌ನಲ್ಲಿದೆ.


4. ಭಾರತವನ್ನು ಪ್ರಜಾಪ್ರಭುತ್ವವನ್ನಾಗಿ ಮಾಡಲು, ಸಂವಿಧಾನವನ್ನು ಕರಡು ಮಾಡಲು, ಕರಡು ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕವಾಗಿ ಮಾಡಲು ಯಾವುದೇ ಅವಕಾಶವಿರಲಿಲ್ಲ. ಆದ್ದರಿಂದ, ಸಂವಿಧಾನ ಸಭೆಯ ಸದಸ್ಯರನ್ನು ಭಾರತದ ಸ್ವಾತಂತ್ರ್ಯದ ನಂತರ ರಚಿಸಲಾದ ಪ್ರಾಂತೀಯ ಅಸೆಂಬ್ಲಿಯಿಂದ ಆಯ್ಕೆ ಮಾಡಲಾಯಿತು.


5. ಈ ದಿನ, ಸಂವಿಧಾನವು ಜಾರಿಗೆ ಬರುವುದರೊಂದಿಗೆ, ಡಾ. ರಾಜೇಂದ್ರ ಪ್ರಸಾದ್ ಅವರು ಪ್ರಜಾಪ್ರಭುತ್ವದ ಭಾರತದ ಅಧ್ಯಕ್ಷರಾಗಿ ತಮ್ಮ ಮೊದಲ ಅಧಿಕಾರಾವಧಿಯನ್ನು ಪ್ರಾರಂಭಿಸಿದರು ಮತ್ತು ಸಂವಿಧಾನ ಸಭೆಯು ಸಂವಿಧಾನದ ಪರಿವರ್ತನಾ ನಿಬಂಧನೆಗಳ ಮೂಲಕ ಮೊದಲ ಸಂಸತ್ತು ರಚನೆಯಾಯಿತು.


6. ಸಂವಿಧಾನ ಸಭೆಯ ನೇತೃತ್ವವನ್ನು ಡಾ.ರಾಜೇಂದ್ರ ಪ್ರಸಾದ್ ವಹಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಡಾ.ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನದ ಶಿಲ್ಪಿ ಎಂದು ಕರೆಯುತ್ತಾರೆ.


7. ಗಣರಾಜೋತ್ಸವದಂದು ಭಾರತದ ರಾಷ್ಟ್ರಪತಿಗಳಿಂದ ಧ್ವಜಾರೋಹಣ, ಸಾಂಸ್ಕೃತಿಕ ಪ್ರದರ್ಶನಗಳು, ಸನ್ಮಾನ ಸಮಾರಂಭ ಮತ್ತು ಭಾರತೀಯ ಮಿಲಿಟರಿ ಶಕ್ತಿಯ ಗಮನಾರ್ಹ ಪ್ರದರ್ಶನ ನಡೆಯುತ್ತದೆ. ಬಳಿಕ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ, ಹಾಡನ್ನು ನುಡಿಸಲಾಗುತ್ತದೆ. ಅದು ಯಾವುದು? ಎಂದಾದರೂ ಯೋಚಿಸಿದ್ದೀರಾ? ಇದು ಅಬೈಡ್ ವಿತ್ ಮಿ. ಇದು ಸ್ಕಾಟಿಷ್ ಆಂಗ್ಲಿಕನ್ ಹೆನ್ರಿ ಫ್ರಾನ್ಸಿಸ್ ಲೈಟ್ ಅವರ ಕ್ರಿಶ್ಚಿಯನ್ ಸ್ತೋತ್ರವಾಗಿದೆ. ಈ ಹಾಡು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ನೆಚ್ಚಿನ ಹಾಡುಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ.

Also read:  ರೇವಣ್ಣ ಕುಟುಂಬದವರು ಜನರ ಪ್ರಾಣ ಹಿಂಡುತ್ತಿದ್ದಾರೆ ಅವರನ್ನು ಸೋಲಿಸಿಬಿಡು: ಹಾಸನಾಂಬೆಗೆ ಭಕ್ತನ ಪತ್ರ

8. 1950ರಿಂದ 1954ರ ನಡುವೆ ಮೊದಲ ನಾಲ್ಕು ಗಣರಾಜ್ಯೋತ್ಸವದ ಪರೇಡ್‌ಗಳು ದೆಹಲಿಯ ವಿವಿಧ ಸ್ಥಳಗಳಲ್ಲಿ ನಡೆದವು.

9. ಬಳಿಕ 1955ರಲ್ಲಿ ರಾಜ್‌ಪಥ್‌ನಲ್ಲಿ ಮೊದಲ ಗಣರಾಜ್ಯೋತ್ಸವ ಪರೇಡ್​ ನಡೆಸಲಾಯಿತು. ರಾಜ್‌ಪಥ್ ಪರೇಡ್‌ನ ಮೊದಲ ಮುಖ್ಯ ಅತಿಥಿಯಾಗಿ ಪಾಕಿಸ್ತಾನದ ಮೊದಲ ಗವರ್ನರ್ ಜನರಲ್ ಆಗಿದ್ದ ಮಲಿಕ್ ಗುಲಾಮ್ ಮೊಹಮ್ಮದ್ ಭಾಗಿಯಾಗಿದ್ದರು.

Also read:  ಕಾಶ್ಮೀರ ಹಿಂಸಾಚಾರಕ್ಕೆ ನಾನು ಕಾರಣನಾಗಿದ್ದರೆ ನೇಣುಗಂಬಕ್ಕೇರಲೂ ಸಿದ್ದ: ಫಾರೂಕ್​ ಅಬ್ದುಲ್ಲಾ


10. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯಅಥಿತಿಗಳು ಭಾಗಿಯಾಗುತ್ತಿಲ್ಲ. ಈ ವರ್ಷದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾರತದ ಮಿಲಿಟರಿಯ ಹಳೆ ಮತ್ತು ಹೊಸ ಯುಗವನ್ನು, ಯೋಧರ ಸಮವಸ್ತ್ರ ಮತ್ತು ಶಸ್ತ್ರಾಸ್ತ್ರಗಳ ಮೂಲಕ ತೋರಿಸಲಾಗುತ್ತಿದೆ. ಸಾವಿರ ಡ್ರೋನ್ ಜೊತೆಗೆ ಲೇಸರ್ ಪ್ರೊಜೆಕ್ಷನ್ ಪ್ರದರ್ಶನ ಕೂಡ ಈ ಬಾರಿಯ ವಿಶೇಷತೆಯಾಗಿದೆ.

Latest article