Wednesday, May 18, 2022

ಶೇ. 100 ರಷ್ಟು ಮೊದಲ ಡೋಸ್ ಲಸಿಕೆ ಗುರಿ ಸಾಧಿಸಿದ 6 ರಾಜ್ಯಗಳು

Must read

ಕೊರೊನಾವನ್ನು ಹಿಮ್ಮಟ್ಟಿಸಲು ಈಗ ನಮ್ಮ ಮುಂದಿರುವ ಅಸ್ತ್ರ ವ್ಯಾಕ್ಸಿನೇಷನ್ ಒಂದೇ. ಹೀಗಾಗಿ ವ್ಯಾಕ್ಸಿನೇಷನ್ ತೆಗೆದುಕೊಳ್ಳುವ ಅಗತ್ಯತೆ ಪ್ರತಿಯೊಬ್ಬರಿಗೂ ಇದೆ. ಭಾರತದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನವೇ ನಡೆಯುತ್ತಿದ್ದು, ಆರು ರಾಜ್ಯಗಳಲ್ಲಿ ಮೊದಲ ಡೋಸ್ ಲಸಿಕೆ ಸಂಪೂರ್ಣವಾಗಿದೆ.

ಹಿಮಾಚಲ ಪ್ರದೇಶ, ಸಿಕ್ಕಿಂ, ಗೋವಾ, ದಾದ್ರಾ ಮತ್ತು ನಗರ್ ಹವೇಲಿ,ಲಡಾಖ್ ಮತ್ತು ಲಕ್ಷದ್ವೀಪ ಈ 6 ರಾಜ್ಯಗಳಲ್ಲಿ ಮೊದಲ ಡೋಸ್ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿರುವ ಬಗ್ಗೆ ಆರೋಗ್ಯ ಇಲಾಖೆಯು ಸ್ಪಷ್ಟ ನೆ ನೀಡಿದೆ.

ಇನ್ನು ಹಿಮಾಚಲ ಪ್ರದೇಶದಲ್ಲಿ ಈಗಾಗಲೇ 55.74 ಲಕ್ಷ ಜನರಿಗೆ ಮೊದಲ ಡೋಸ್ ನೀಡಲಾಗಿದೆ. ಸಿಕ್ಕಿಂನಲ್ಲಿ 5.10ಲಕ್ಷ ಜನರಿಗೆ ಗೋವಾ, ರಾಜ್ಯದಲ್ಲಿ 11.83ಲಕ್ಷ ಜನರಿಗೆ, ದಾದ್ರಾ ಮತ್ತು ನಗರ್ ಹವೇಲಿ ನಲ್ಲಿ 6.26 ಲಕ್ಷ ಜನರಿಗೆ, ಲಡಾಖ್​​ನಲ್ಲಿ 1.97 ಲಕ್ಷ ಮಂದಿಗೆ ಹಾಗೂ ಲಕ್ಷದ್ವೀಪ ದಲ್ಲಿ 53,499 ಜನರಿಗೆ ಲಸಿಕೆಯನ್ನು ನೀಡಲಾಗಿದೆ.

Latest article