ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬಕ್ಕೆ ಈ ಬಾರಿ ಟ್ವಿಟರ್ನಲ್ಲಿ ಶುಭ ಕೋರಿದವರಿಗಿಂತ ಉದ್ಯೋಗ ಕೇಳಿದವರ ಸಂಖ್ಯೆಯೇ ಹೆಚ್ಚಾಗಿತ್ತು. ರಾಷ್ಟ್ರೀಯ ಬೇರೋಜ್ಗಾರ್ ದಿವಸ, ನ್ಯಾಷನಲ್ ಅನ್ಎಂಪ್ಲಾಯ್ಮೆಟ್ ಡೇ, ಮೋದಿ ರೋಜ್ಗಾರ್ ದೋ ಎಂಬ ಹ್ಯಾಷ್ಟ್ಯಾಗ್ಗಳು ಟ್ವಿಟ್ಟರ್ನಲ್ಲಿ ಭಾರೀ ಸದ್ದು ಮಾಡುತ್ತಿವೆ.
ಈಗಿನ ಟ್ವಿಟರ್ ಟ್ರೆಂಡಿಂಗ್ ಅಂಕಿಅಂಶ ಪ್ರಕಾರ #HappyBdayModiji ಎಂಬ ಹ್ಯಾಷ್ಟ್ಯಾಗ್ನಲ್ಲಿ ಸುಮಾರು 5.49 ಲಕ್ಷ ಮಂದಿ ಟ್ವೀಟ್ ಮಾಡಿದ್ದಾರೆ. #राष्ट्रीय_बेरोजगार_दिवस ಎಂಬ ಹಿಂದಿ ಹ್ಯಾಷ್ಟ್ಯಾಗ್ನಲ್ಲಿ ಸುಮಾರು 16.2 ಲಕ್ಷ ಟ್ವೀಟ್ಗಳಿವೆ. #NationalUnemploymentDay ಹ್ಯಾಷ್ಟ್ಯಾಗ್ನಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಟ್ವೀಟ್ಗಳನ್ನು ಮಾಡಲಾಗಿದೆ. ಇನ್ನು #मोदी_रोजगार_दो ಎಂಬ ಮತ್ತೊಂದು ಹ್ಯಾಷ್ಟ್ಯಾಗ್ನಲ್ಲಿ 6.1 ಲಕ್ಷ ಟ್ವೀಟ್ಗಳನ್ನು ಮಾಡಲಾಗಿದೆ.
ಜೊತೆಗೆ ಇನ್ನೊಂದು ಹ್ಯಾಷ್ ಟ್ರೆಂಡಿಗ್ ಸಾಕಷ್ಟು ನೆಗೆಪಾಟಲಿಗೆ ಕಾರಣವಾಗಿದೆ. (ರಾಷ್ಟ್ರೀಯ ನಮ್ಮ ಹಣೆ ಬರಹ ಸರಿ ಇಲ್ಲದವರ ದಿನ) #अखंड_पनौती_दिवस ಎಂಬ ಹ್ಯಾಷ್ಟ್ಯಾಗ್ನಲ್ಲಿ ಸುಮಾರು 3.92 ಲಕ್ಷ ಮಂದಿ ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ಪ್ರಧಾನಿ ಮೋದಿಯವರಿಗೆ ಹುಟ್ಟು ಹಬ್ಬದ ಬದಲು ನಿರುದ್ಯೋಗ ನಿವಾರಿಸುವಂತೆ ಕೋರಿ 34 ಲಕ್ಷಕ್ಕೂ ಹೆಚ್ಚು ಟ್ವೀಟ್ಗಳನ್ನು ಮಾಡಲಾಗಿದೆ.