Thursday, January 20, 2022

ಕೋವಿಡ್ ಲಸಿಕಾ ಅಭಿಯಾನದಲ್ಲಿ ಕಾಂಗ್ರೆಸ್ ಆಡಳಿತದ ರಾಜ್ಯಗಳ ನಿರ್ಲಕ್ಷ್ಯ..!

Must read

ದೇಶವು ಹೆಚ್ಚೆಚ್ಚು ಕೊರೊನಾ ಲಸಿಕೆ ಅಭಿಯಾನವನ್ನು ನಡೆಸುತ್ತಿದೆ. ಏತನ್ಮಧ್ಯೆ, ಕಾಂಗ್ರೆಸ್ ಆಡಳಿತದಲ್ಲಿರುವ ಮತ್ತು ಅದರ ಮಿತ್ರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕೊರೊನಾ ಲಸಿಕೆ ನೀಡಿಕೆಯಲ್ಲಿ ನಿರಾಸಕ್ತಿ ವಹಿಸಿದೆ ಎಂದು ಅಧಿಕೃತ ದತ್ತಾಂಶವು ಬಹಿರಂಗಪಡಿಸಿದೆ. ಕಾಂಗ್ರೆಸ್ ಅಥವಾ ಅದರ ಮಿತ್ರ ಪಕ್ಷವು ರಾಜ್ಯದ ಶೇಕಡಾ 90ಕ್ಕಿಂತ ಹೆಚ್ಚು ಜನರಿಗೆ ಕೊರೊನಾ ಮೊದಲ ಡೋಸ್ ಮತ್ತು ಎರಡನೇ ಡೋಸ್ ಅನ್ನು ಶೇಕಡಾ 50ಕ್ಕಿಂತ ಹೆಚ್ಚು ಜನರಿಗೆ ನೀಡಲು ಸಾಧ್ಯವಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ಕನಿಷ್ಠ 7 ರಾಜ್ಯಗಳಲ್ಲಿ ಕೊರೊನಾ ಮೊದಲ ಡೋಸ್​​​​ನ ಶೇಕಡಾ 90ಕ್ಕಿಂತ ಹೆಚ್ಚಿನ ವ್ಯಾಪ್ತಿಯನ್ನು ಬಿಜೆಪಿ ಪಡೆದಿದೆ ಮತ್ತು 8 ಬಿಜೆಪಿ ಆಡಳಿತ ರಾಜ್ಯಗಳು ಕೊರೊನಾದ ಎರಡನೇ ಡೋಸ್​ನ ಶೇಕಡಾ 50ರ ಗಡಿಯನ್ನು ಮುಟ್ಟಿವೆ. ಆದರೆ, ಕಾಂಗ್ರೆಸ್ ಅಥವಾ ಅದರ ಮಿತ್ರ ರಾಜ್ಯಗಳಲ್ಲಿ ಈ ಪ್ರಮಾಣ ತೀರಾ ಕಡಿಮೆ ಇದೆ.

ಮೊದಲ ಡೋಸ್, ಎರಡನೇ ಡೋಸ್ ಸ್ಥಿತಿ

ಜಾರ್ಖಂಡ್ 62.2% – 30.8%

ಪಂಜಾಬ್ 72.5% – 32.8%

ತಮಿಳುನಾಡು 78.1% – 42.65%

ಮಹಾರಾಷ್ಟ್ರ 80.11% – 42.5%

ಛತ್ತೀಸ್ ಗಢ 83.2%- 47.2%

ರಾಜಸ್ಥಾನ 84.2% – 46.9%

ಪಶ್ಚಿಮ ಬಂಗಾಳ 86.6% – 39. 4%

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮೊದಲ ಡೋಸ್, ಎರಡನೇ ಡೋಸ್ ಸ್ಥಿತಿ

ಗೋವಾ 100% – 87.9%

ಗುಜರಾತ್ 93.5% -70.3%

ಉತ್ತರಾಖಂಡ 93.0% – 61.1%

ಮಧ್ಯಪ್ರದೇಶ 92.8% – 62.9%

ಕರ್ನಾಟಕ ಶೇ.90.9 – 59.1

ಹರಿಯಾಣ 90.04% – 48.3%

ಅಸ್ಸಾಂ 88.9% – 50%

ತ್ರಿಪುರಾ 80.5% – 63.5%

ದೇಶದಲ್ಲಿ ಈವರೆಗೆ 123 ಕೋಟಿ (1,23,15,90,156) ಡೋಸ್ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ. ಈ ಮಾಹಿತಿಯನ್ನು ಭಾರತ ಸರ್ಕಾರದ covin.gov.in ತೆಗೆದುಕೊಳ್ಳಲಾಗಿದೆ. ಕೋವಿನ್ ದತ್ತಾಂಶದ ಪ್ರಕಾರ, ಸೋಮವಾರ ಸಂಜೆ 5:30 ರವರೆಗೆ 71,66,393 ಡೋಸ್ ಗಳನ್ನು ನೀಡಲಾಗಿದೆ.

Also read:  ದೇಶವ್ಯಾಪಿ ಚರ್ಚ್​ಗಳ ಮೇಲೆ ದಾಳಿ..ಬಿಜೆಪಿ ವಿರುದ್ದ ಪಿ.ಚಿದಂಬರಂ ವಾಗ್ದಾಳಿ..!

Latest article