Thursday, January 20, 2022

ಕತುವಾ ಅತ್ಯಾಚಾರ ಪ್ರಕರಣ; ಸಂತ್ರಸ್ತೆ ಗುರುತು ಬಹಿರಂಗಪಡಿಸುವವರಿಗೆ 6 ತಿಂಗಳು ಜೈಲು- ದೆಹಲಿ ಹೈಕೋರ್ಟ್

Must read

ಕತುವಾ ಅತ್ಯಾಚಾರ ಸಂತ್ರಸ್ತೆ ಗುರುತು ಬಹಿರಂಗ: ರೂ.10 ಲಕ್ಷ ದಂಡ ಕಟ್ಟುವಂತೆ ಮಾಧ್ಯಮಗಳಿಗೆ ನ್ಯಾಯಾಲಯ ಸೂಚನೆ

ನವದೆಹಲಿ: ಕತುವಾ ಅತ್ಯಾಚಾರ ಪ್ರಕರಣದ ಸಂತ್ರಸ್ತ ಬಾಲಕಿಯ ಗುರುತುಗಳನ್ನು ಬಹಿರಂಗ ಪಡಿಸುವ ಯಾವುದೇ ವ್ಯಕ್ತಿಗೆ 6 ತಿಂಗಳು ಜೈಲು ವಿಧಿಸಲಾಗುವುದು ಎಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ.

ಕತುವಾ ಅತ್ಯಾಚಾರ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿರುವ ನ್ಯಾಯಾಲಯವು ಅತ್ಯಾಚಾರ ಸಂತ್ರಸ್ತ ಬಾಲಕಿಯ ಗುರುತುಗಳನ್ನು ಬಹಿರಂಗಪಡಿಸುವವರಿಗೆ 6 ತಿಂಗಳು ಜೈಲುಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್. 25ಕ್ಕೆ ನಡೆಸುವುದಾಗಿ ತಿಳಿಸಿದೆ.

ಆಲ್ಲದೆ, ಇದೇ ವೇಳೆ ಮಾಧ್ಯಮಗಳ ವಿರುದ್ಧವೂ ಚಾಟಿ ಬೀಸಿರುವ ನ್ಯಾಯಾಲಯ, ಅತ್ಯಾಚಾರ ಸಂತ್ರಸ್ತೆ ಬಾಲಕಿಯ ಗುರುತುಗಳನ್ನು ಬಹಿರಂಗಪಡಿಸಿ ನೋಟಿಸ್ ಗಳನ್ನು ಪಡೆದಿರುವ ಮಾಧ್ಯಮಗಳು ರೂ.10 ಲಕ್ಷ ದಂಡ ಕಟ್ಟುವಂತೆ ಆದೇಶಿಸಿದ್ದು, ದಂಡದ ಹಣವನ್ನು ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಪರಿಹಾರವಾಗಿ ನೀಡುವುದಾಗಿ ಹೇಳಿದೆ.

Latest article