ಅಮೆರಿಕದ ಯುದ್ಧ ವಿಮಾನಕ್ಕೆ ಜೋಕಾಲಿ ಕಟ್ಟಿ ಆಟವಾಡಿದ ತಾಲಿಬಾನಿಗಳು

ಅಫ್ಘಾನಿಸ್ತಾನದಲ್ಲಿ ಅಮೆರಿಕದ ಬಿಟ್ಟು ಹೋದ ವಿಮಾನದ ರೆಕ್ಕೆಗೆ ತಾಲಿಬಾನಿಗಳು ಜೋಕಾಲಿ ಕಟ್ಟಿ ಆಟವಾಡಿರುವ ವಿಡಿಯೋ ವೈರಲ್ ಆಗಿದೆ.
ಅಮೆರಿಕದ ಯುದ್ಧ ವಿಮಾನಕ್ಕೆ ಜೋಕಾಲಿ ಕಟ್ಟಿ ಆಟವಾಡಿದ ತಾಲಿಬಾನಿಗಳು

ಚೀನಾ: ಅಫ್ಘಾನಿಸ್ತಾನದಲ್ಲಿಅಮೆರಿಕ ಬಿಟ್ಟು ಹೋದ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ವಿಮಾನಗಳು ತಾಲಿಬಾನಿಗಳ ಪಾಲಾಗಿವೆ. ಈ ವಿಮಾನಗಳನ್ನು ತಾಲಿಬಾನಿಗಳು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಚಾರಕ್ಕೆ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿಜಿಯಾನ್ ಝಾವೋ ವಿಡಿಯೋವೊಂದನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಮೆರಿಕ ಬರೋಬ್ಬರಿ 20 ವರ್ಷಗಳ ಬಳಿಕ ಅಫ್ಘಾನಿಸ್ತಾನ ತೊರೆದ ನಂತರ ಅವರು ಬಿಟ್ಟು ಹೋಗಿರುವ ಯುದ್ಧ ವಿಮಾನವೊಂದರ ರೆಕ್ಕೆಗೆ ಜೋಕಾಲಿ ಕಟ್ಟಿ ತಾಲಿಬಾನಿಗಳು ಆಟವಾಡುತ್ತಿರುವ ವಿಡಿಯೋವನ್ನು ಲಿಜಿಯಾನ್ ಝಾವೋ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾಮ್ರಾಜ್ಯಗಳು ಮತ್ತು ಯುದ್ಧ ಯಂತ್ರಗಳ ಸ್ಮಶಾನ. ತಾಲಿಬಾನಿಗಳು ಅಮೆರಿಕದ ವಿಮಾನವನ್ನು ಆಟದ ವಸ್ತುವಾಗಿ ಪರಿವರ್ತಿಸಿದ್ದಾರೆ ಎಂದು ವಿಡಿಯೋದ ಜೊತೆಗೆ ವ್ಯಂಗ್ಯವಾಡಿದ್ದಾರೆ.

Related Stories

No stories found.
TV 5 Kannada
tv5kannada.com