ತಾಲಿಬಾನಿಗಳಿಂದ ಶಿಕ್ಷೆ ಪಟ್ಟಿ ಪ್ರಕಟ: ಯಾವ ತಪ್ಪಿಗೆ ಯಾವ ಶಿಕ್ಷೆ..?

ತಾಲಿಬಾನಿಗಳಿಂದ ಶಿಕ್ಷೆ ಪಟ್ಟಿ ಪ್ರಕಟ: ಯಾವ ತಪ್ಪಿಗೆ ಯಾವ ಶಿಕ್ಷೆ..?

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ತಮ್ಮದೇ ಸರ್ಕಾರ ರಚಿಸಲು ಹೊರಟಿರುವ ತಾಲಿಬಾನಿಗಳು, ಹಲವಾರು ಹೊಸ ಹೊಸ ಕಾನೂನುಗಳನ್ನು ತರುತ್ತಿದ್ದಾರೆ. ಶರಿಯಾ ನಿಯಮದ ಅಡಿಯಲ್ಲಿ ನಿಯಮಗಳನ್ನು ಜಾರಿ ಮಾಡಲು ಹೊರಟಿರುವ ಉಗ್ರರು, ಇದೀಗ ತಮ್ಮ ಶಿಕ್ಷೆ ಪಟ್ಟಿಯನ್ನು ಪ್ರಕಟ ಮಾಡಿದ್ದಾರೆ.

ತಾಲಿಬಾನಿಗಳು ನೀಡುವ ಶಿಕ್ಷೆ ಹೀಗಿರಲಿದೆ?

ಉದ್ದೇಶಪೂರ್ವಕವಾಗಿ ಕೊಲೆ ಮಾಡಿದವರನ್ನು ಹತ್ಯೆ ಮಾಡುವುದು.

ಉದ್ದೇಶರಹಿತ ಕೊಲೆಯಾಗಿದ್ದಲ್ಲಿ ಆತನಿಂದ ದಂಡ ವಸೂಲಿ ಮಾಡುವುದು.

ಕಳ್ಳತನ ಮಾಡಿದವರ ಕೈಗಳನ್ನು ಕತ್ತರಿಸುವುದು.

ಅನೈತಿಕ ಸಂಬಂಧ ಹೊಂದಿದ್ದಲ್ಲಿ ಕಲ್ಲಿನಿಂದ ಹೊಡೆಯುವುದು.

ಮಹಿಳೆ ಮತ್ತು ಪುರುಷ ಇಬ್ಬರು ಅನೈತಿಕ ಸಂಬಂಧದಲ್ಲಿ ತೊಡಗಿದ್ದರೆ ಅವರನ್ನು ಸಾರ್ವಜನಿಕವಾಗಿ ಹತ್ಯೆಗೈಯುವುದು.

Related Stories

No stories found.
TV 5 Kannada
tv5kannada.com