ಅಫ್ಘಾನಿಸ್ತಾನದಲ್ಲಿ ವಿಮಾನ ಸೇವೆ ಆರಂಭ

ಅಫ್ಘಾನಿಸ್ತಾನದಲ್ಲಿ ವಿಮಾನ ಸೇವೆ ಆರಂಭ

ಕಾಬೂಲ್: ಅಫ್ಘಾನಿಸ್ತಾನ ತೊರೆಯಲು ಹವಣಿಸುತ್ತಿರುವವರಿಗೆ ಹೊಸ ಆಶಾಕಿರಣವೊಂದು ಮಾಡಿದೆ. ಕಳೆದ ಒಂದು ತಿಂಗಳಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಮತ್ತೆ ಆರಂಭವಾಗಿದೆ.

ಕಾಬೂಲ್​ ವಿಮಾನ ನಿಲ್ದಾಣಕ್ಕೆ ಪಾಕಿಸ್ತಾನದ ವಿಮಾನವೊಂದು ಬಂದಿಳಿದಿದೆ. ಅಫ್ಘಾನಿಸ್ತಾನಕ್ಕೆ ಬಂದಿಳಿದ ಮೊದಲ ಅಂತಾರಾಷ್ಟ್ರೀಯ ವಿಮಾನ ಇದಾಗಿದೆ. ಇಸ್ಲಾಮಾಬಾದ್‌ನಿಂದ ಹೊರಟ ಪಾಕಿಸ್ತಾನ ವಿಮಾನ ಕಾಬೂಲ್‌ಗೆ ಬಂದಿಳಿದಿದೆ. ಕಾಬೂಲ್‌ನಿಂದ ಈ ವಿಮಾನ 70 ಪ್ರಯಾಣಿಕರನ್ನು ಹೊತ್ತು ಪಾಕಿಸ್ತಾನಕ್ಕೆ ಮರಳಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗಿದೆ. ಇದರ ನಡುವೆ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಗೊಂಡಿದ್ದು, ಸದ್ಯ ಕಾಬೂಲ್-ಇಸ್ಲಾಮಾಬಾದ್ ಸೇವೆ ಮಾತ್ರ ಲಭ್ಯವಿದೆ. ಅಂತಾರಾಷ್ಟ್ರೀಯ ವಿಮಾನ ಹಾರಾಟದಿಂದ ಅಫ್ಘಾನಿಸ್ತಾನ್​ ಜನರಲ್ಲಿ ಹೊಸ ಭರವಸೆ ಮೂಡಿದೆ.

Related Stories

No stories found.
TV 5 Kannada
tv5kannada.com