ತಾಲಿಬಾನ್ ಸರ್ಕಾರ ರಚನೆ ಹಿಂದಿದೆ ಪಾಕ್ ಷಡ್ಯಂತ್ರ

ತಾಲಿಬಾನ್ ಸರ್ಕಾರ ರಚನೆ ಹಿಂದಿದೆ ಪಾಕ್ ಷಡ್ಯಂತ್ರ

ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗಲು ಪಾಕಿಸ್ತಾನದ ಪಾತ್ರ ಮಹತ್ತರವಾಗಿದೆ. ಕಾಬೂಲ್ ಹಾಗೂ ಇಸ್ಲಾಮಾಬಾದ್​​ನಲ್ಲಿ ಪಾಕ್ ನಿರ್ವಹಿಸುತ್ತಿರುವ ಪಾತ್ರ ಭಾರತಕ್ಕೆ ಒಳ್ಳೆಯ ಸಂದೇಶ ರವಾನಿಸುತ್ತಿಲ್ಲವೆಂದು ಅಮೆರಿಕಾದ ಪ್ರಮುಖ ಸಂಸದರು ಅಭಿಪ್ರಾಯಪಟ್ಟಿದ್ದಾರೆ.

ಅಫ್ಘಾನಿಸ್ತಾನ ವಿಚಾರ ಕುರಿತಂತೆ ಮಾತನಾಡಿರುವ ರಿಪಬ್ಲಿಕನ್ ಸಂಸದ ಮಾರ್ಕೋ ರುಬಿಯೋ ಅವರು, ಪಾಕ್ ನಡೆಸುತ್ತಿರುವ ಇಬ್ಬಗೆ ನೀತಿ ವಿರುದ್ಧ ಅಮೆರಿಕಾದ ಹಲವಾರು ಸಂಸದರು ಅಸಮಾಧಾನಗೊಂಡಿದ್ದಾರೆಂದು ತಿಳಿಸಿದರು.

ಸದ್ಯದಲ್ಲೇ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಭಾರತ ಒಂದು ಉತ್ತಮ ಘೋಷಣೆ ಮಾಡಲಿದೆ ಎಂಬ ವಿಶ್ವಾಸ ನಮಗಿದೆ. ಒಂದು ವೇಳೆ ಅಮೆರಿಕಾ ಪಾಕ್ ಪರ ನಿಲುವು ತೋರಿದರೆ ಅದು ಮಾರಕವಾಗಲಿದೆ ಎಂದು ಎಚ್ಚರಿಸಿದ್ದಾರೆ.

Related Stories

No stories found.
TV 5 Kannada
tv5kannada.com